Monday, December 4, 2023
spot_img
- Advertisement -spot_img

ನನಗೆ ಎರಡ್ಮೂರು ಸಾವಿರಕ್ಕೆ ಕರೆಂಟ್ ಕದಿಯೋ ದಾರಿದ್ರ್ಯ ಬಂದಿಲ್ಲ: ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಆಚರಣೆ ಬಳಿಕ ದಿನಕ್ಕೆ ಒಂದೊಂದು ರೀತಿಯ ಸುದ್ದಿ ಬರ್ತಾ ಇದೆ. ದೀಪಾವಳಿ ಹಬ್ಬದಲ್ಲಿ ಕುಮಾರಸ್ವಾಮಿ ಮನೆಗೆ ವಿದ್ಯುತ್ ಅಲಂಕಾರಕ್ಕೆ ಕರೆಂಟ್ ಕಳ್ಳತನ ಮಾಡಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಹೇಳಿದ್ರು. ಕರೆಂಟ್ ಕದಿಯೋವಷ್ಟು ದಾರಿದ್ರ್ಯ ಬಂದಿದೆಯಾ ಅನ್ನೋ ಮಾತು ಆಡಿದ್ರು ಎಂದು ಇದಕ್ಕೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಬೇಸರ ಹೊರಹಾಕಿದ್ದಾರೆ.

ಜೆಪಿ‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೋ ಮಾಡಿದ ಅಚಾತುರ್ಯಕ್ಕೆ ನಾನು ತಲೆ ಮೇಲೆ ಹೊತ್ತುಕೊಂಡೆ ಅಂತಲೂ ಹೇಳಿದ್ದೇನೆ ನಂತರ ಜೆಪಿ ಭವನದಲ್ಲಿ ಪೋಸ್ಟರ್ ಅಂಟಿಸಿದ್ರು. ಕಾಂಗ್ರೆಸ್ ಗೆ ಪೋಸ್ಟರ್ ಅಂಟಿಸುವ ಚಾಳಿಯೊಂದು ಶುರುವಾಗಿದೆ ಎಂದು ಕಿಡಿಕಾರಿದ್ದಾರೆ.

ಚುನಾವಣೆ ಸಮಯದಲ್ಲಿ ಪೇ ಸಿಎಂ ಅಂತ ಹಾಕಿದ್ರು. ಈಗ ಪಂಚರಾಜ್ಯ ಚುನಾವಣೆಗೆ ಗಂಟುಮೂಟೆ ಸಮೇತ ಹೋಗ್ತಾ ಇದ್ದಾರೆ. ಟ್ರಾನ್ಸಫರ್ ದಂಧೆ ವಿಚಾರ ನಾನು ಪ್ರಸ್ತಾಪ ಮಾಡಿದಾಗ ಕುಮಾರಸ್ವಾಮಿ ಮೇಲೆ ಮುಗಿಬಿದ್ರು. ಬುದ್ಧಿ ಭ್ರಮಣೆಯಿಂದ ಹೀಗೆ ಮಾಡ್ತಾ ಇದ್ದಾರೆ ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.4 ರಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ

ಎಎಸ್‌ಟಿ, ವೈಎಸ್ ಟಿ ಹೇಳಿದಾಗ ನನ್ನ ಬಗ್ಗೆ ಲಘುವಾಗಿ ಮಾತಾಡಿದ್ರು. ಅಂದು ಸಿದ್ದರಾಮಯ್ಯ ಹೇಳ್ತಾರೆ, ಯಡಿಯೂರಪ್ಪ ಸರ್ಕಾರದಲ್ಲಿ ಎಲ್ಲ ವ್ಯವಹಾರ ವಿಜಯೇಂದ್ರ ಮಾಡ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನ ಸಿದ್ದರಾಮಯ್ಯ ಅವರೇನಾದ್ರೂ ಮರೆತಿದ್ರೆ ತಮ್ಮ ಮೂಲಕ ನೆನಪು ಮಾಡಿಕೊಳ್ಳಲಿ.

́2-3 ಸಾವಿರಕ್ಕೆ ಕರೆಂಟ್ ಕದಿಯೋ ದಾರಿದ್ರ್ಯ ಬಂದಿಲ್ಲ ನನಗೆ́́ ʼ

2-3 ಸಾವಿರಕ್ಕೆ ಕರೆಂಟ್ ಕದಿಯೋ ದಾರಿದ್ರ್ಯ ಬಂದಿಲ್ಲ ನನಗೆ, ಕೋಮುವಾದಿ ಜನತಾದಳದಿಂದ ಬಿಟ್ಟು ಬಂದ್ರು ಅಂದ್ರು. ರಾಜಣ್ಣ ಹೇಳ್ತಾ ಇದ್ರು ಚರಂಡಿ ನೀರು ಬರ್ತಿದೆ ತುಂಬಿಸಿಕೊಳ್ತೀವಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಒಳ್ಳೆಯ ನೀರು ತುಂಬಿಸಿಕೊಳ್ಳಲ್ಲ, ಚರಂಡಿ ನೀರೇ ತುಂಬಿಸಿಕೊಳ್ಳೋದು. ಕುಮಾರಸ್ವಾಮಿ ಹೇಳೋದು ಸುಳ್ಳು ಅವನಿಗ್ಯಾಕೆ ಉತ್ತರ ಕೊಡಬೇಕು ಅಂದ್ರು. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಅಂತಲೂ ಹೇಳಿದ್ರು.

ಈ ಮಾತ್ಯಾಕೆ ಹೇಳಿದ್ರು ಅವರು ತಿಂತಾ ಇದ್ದೀವಿ, ಇದಕ್ಕಿಂತ ಸಾಕ್ಷಿ ಬೇಕಾ ಇವರಿಗೆ? ಯಡಿಯೂರಪ್ಪ ಮಗನ ಬಗ್ಗೆ ಮಾತಾಡಿದ್ರಲ್ಲ, ಇವರು ಅಂದು ಯಾವ ದಾಖಲೆ ಇಟ್ಟರು? ಪೇ ಸಿಎಂ ಅಂತ ಬೀದಿ ಬೀದಿಲಿ ಹಾಕಿದ್ರಲ್ಲ, ಯಾವ ಸಾಕ್ಷಿ ಇಟ್ಟರು ಇವರು? ನಿಮ್ಮದು ಕ್ಯಾಶ್ ಟ್ರಾನ್ಸಕ್ಷನ್‌ ಅಲ್ಲ. 45 ಕೋಟಿ ಹಿಡಿದ್ರಲ್ಲ, ಅದು ನಮ್ಮದಲ್ಲ ನಮ್ಮದಲ್ಲ ಅಂತಾರಲ್ಲ, ಅದು ಸಂಪಾದನೆ ಮಾಡಿ ಇಟ್ಟಿದ್ದ ಒಬ್ಬ ಸಿಎಂ ಅಕೌಂಟೆಬಿಲಿಟಿ ಈ ಪುಸ್ತಕದಲ್ಲಿ ಬರೆದಿದ್ದಾರೆ.

ಯತೀಂದ್ರರಿಗೆ ಫೋನ್‌ ಮಾಡಿದ್ಯಾರು? ಹೇಳಿ ಅಪ್ಪ ಅಂದಿದ್ಯಾರಿಗೆ?

ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು, ಹೇಳಿ ಅಪ್ಪ ಅಂದಿದ್ದು ಯಾರಿಗೆ? ಯಾರೇಳಿದ್ದು ವಿವೇಕಾನಂದ ಯಾರು, ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ? ನಾಲ್ಕೈದು ಲಿಸ್ಟ್ ಯಾವುದು ಹಾಗಾದ್ರೆ? ಇದ್ಯಾವ ಚೀಫ್ ಮಿನಿಸ್ಟರ್, ಸೂಪರ್ ಚೀಫ್ ಮಿನಿಸ್ಟರ್? ಎಂದು ಪ್ರಶ್ನಿಸಿದ್ದಾರೆ. ನಾನೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ಬಿಟ್ಟು ಇನ್ನೇನಕ್ಕೆ ಮಾತಾಡಿದ್ದು? ಕೊಡಿ ತನಿಖೆಗೆ ಗೊತ್ತಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ನಾನು ಸಿನಿಮಾದಲ್ಲಿ ಇದ್ದಾಗ ಜಮೀನು ಮಾಡಿದ್ದು. ನನ್ನ ಆಸ್ತಿ ಬಗ್ಗೆ ತನಿಖೆ ಮಾಡಿ ಅಂದಿದ್ರಲ್ಲ ಹಿಂದೆ ನನ್ನ ಜೊತೆಗೆ ಇದ್ರು ಎಂದು ಹೆಸರು ಹೇಳದೆ ಚೆಲುವರಾಯಸ್ವಾಮಿ ಮೇಲೆ ಹೆಚ್.ಡಿ.ಕೆ. ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ: HSRP ನಂಬರ್ ಪ್ಲೇಟ್ ನೊಂದಣಿಗೆ ಅವಧಿ ವಿಸ್ತರಣೆ

ರಾಜಕಾರಣಕ್ಕೆ ದುಡ್ಡು ಬೇಕು ಹಾಗಂತ ಸರ್ಕಾರದ ಆದೇಶಗಳನ್ನ ಬಿಕರಿಗೆ ಇಟ್ಟಿರಲಿಲ್ಲ. ಯತ್ನಾಳ್ ಬಿಜೆಪಿ ಇದ್ದಾಗ ದೇವೇಗೌಡರ ಬಗ್ಗೆ ಮಾತಾಡಿದ್ರು. ದೇವೇಗೌಡರ ಬಗ್ಗೆ ಮಾತಾಡಿದ್ರೆ ಹುಷಾರ್ ನನ್ನ ಬಗ್ಗೆ ಮಾತಾಡಿ, ಹೌದು ನಾನೇನು ಸಾಚಾ ಅಲ್ಲ. ಹಣ ಇಲ್ಲದೇ ಇದ್ರೆ ಅಧಿಕಾರ ಮಾಡಲು ಆಗಲ್ಲ. ಹಿಂದೆ ನನ್ನದೊಂದು ಆಡಿಯೋ ಬಿಡುಗಡೆ ಮಾಡಿದ್ದು ಇನ್ನೂ ನನಗೆ ನೆನಪಿದೆ. ನಾನು ನನಗಾಗಿ ಹಣ ಕೇಳಿರಲಿಲ್ಲ ಪಕ್ಷಕ್ಕಾಗಿ ಮಾಡಿದ್ದೇನೆ. ಸರ್ಕಾರದ ಆದೇಶ ಮಾರಾಟಕ್ಕೆ ಇಡಬೇಡಿ ಎಂದು ಹರಿಹಾಯ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles