ಹುಬ್ಬಳ್ಳಿ : ಬಿಜೆಪಿ ಯಾವತ್ತೂ ಮುಸ್ಲಿಮರನ್ನು ದೇಶದಿಂದ ಹೊರ ಹಾಕಬೇಕು, ವಿರೋಧ ಮಾಡಬೇಕು ಎಂದು ಹೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದರೆ ಒಂದು ಸಣ್ಣ ಹುಡುಗ ಕೂಡಾ ಭಯ ಪಡುವುದಿಲ್ಲ, ವಿಶ್ವದ ನಂಬರ್ ಒನ್ ನಾಯಕ ನರೇಂದ್ರ ಮೋದಿ ಅವರು ಭಯ ಪಡುತ್ತಾರೆಂದರೆ ಇದು ಈ ವರ್ಷದ ಜೋಕ್, ನರೇಂದ್ರ ಮೋದಿ ಅವರು ಯಾಕೆ ಭಯಪಡಬೇಕು. ಇದೀಗ ಜಗತ್ತು ಮೋದಿ ಅವರನ್ನು ಮೆಚ್ಚುತ್ತಿದೆ ಎಂದರು.
ಸಿದ್ದರಾಮಯ್ಯ ಆರ್ ಎಸ್ಎಸ್ ಬಗ್ಗೆ ಮಾತನಾಡಲಿ, ಯಾರು ಬೇಡ ಅಂತಾರೆ. ಜನ ಅದಕ್ಕೆ ಉತ್ತರ ಕೊಡುತ್ತಾರೆ. ಆರ್ ಎಸ್ಎಸ್ ಒಂದು ದೇಶಭಕ್ತಿ ಸಂಘಟನೆ. ಜನ ಹಾಗೂ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಅಂತಹ ಸಂಘಟನೆಯ ಬಗ್ಗೆ ನೀವು ಮಾತನಾಡುತ್ತೀರಿ ಅಂದರೆ ನಿಮ್ಮ ಗೌರವ ಕಡಿಮೆಯಾಗುತ್ತದೆ ಅಷ್ಟೇ ಎಂದು ಕಿಡಿಕಾರಿದರು. ಬಿಜೆಪಿ ಮುಸ್ಲಿಂ ವಿರೋಧಿ ಎಂದು ಯಾವತ್ತೂ ಬಿಂಬಿಸಿಕೊಂಡಿಲ್ಲ, ಆರ್ ಎಸ್ ಎಸ್ ಹಿಂದೂಗಳ ಸಂಘಟನೆ ಮಾಡುತ್ತದೆ ಎಂದರು.