Thursday, September 28, 2023
spot_img
- Advertisement -spot_img

ಒಂದಲ್ಲ, ನೂರು ತನಿಖೆ ಬೇಕಾದ್ರೂ ನಡೆಸಿ: ಕೆ.ಸುಧಾಕರ್‌

ಚಿಕ್ಕಬಳ್ಳಾಪುರ: ಕೋವಿಡ್‌ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರ ಆಯೋಗ ರಚಿಸಿದ್ದು, ಈ ಬಗ್ಗೆ ಮಾಜಿ ಆರೋಗ್ಯ ಸಚಿವ ಕೆ.ಸುಧಾಕರ್‌ ವಾಗ್ದಾಳಿ ನಡೆಸಿದರು.

ನನ್ನ ವಿರುದ್ದ ತನಿಖೆ ಮಾಡ್ತೀರಾ ನೀವು? ಒಂದಲ್ಲ ನೂರು ತನಿಖೆ ಮಾಡಿ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಸವಾಲು ಕೂಡ ಹಾಕಿದರು.

ನಮ್ಮ ಪ್ರಾಣ ಒತ್ತೆ ಇಟ್ಟು, ಈ ರಾಜ್ಯದ ಜನರ ಪ್ರಾಣ ಕಾಪಾಡಿದ್ದೀವಿ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ತಪ್ಪು ನಡೆದಿಲ್ಲ. ಮೆಡಿಕಲ್ ಕಾಲೇಜು ಪೂರ್ತಿ ಮಾಡಲು ಯೋಗ್ಯತೆ ಇಲ್ಲ. ಗುತ್ತಿಗೆದಾರರಿಗೆ ಹಣ ಕೊಡುವುದಕ್ಕೂ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಅನಿಲ್ ಆಂಟನಿ ನೇಮಕ

ಪುಣ್ಯಾತ್ಮರು ಕಾಲಿಟ್ಟಿದ್ದೇ ಮಳೆ ಮಾಯ ಆಗೋಯ್ತು: ಇನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಸುಧಾಕರ್‌, ಸರ್ಕಾರ ಏನು ಅವರಪ್ಪದೇನ್ರೀ.. ಅನುದಾನ ಕೊಡದೇ ಇರೋಕೆ. ಸಾವಿರಾರು ಕೋಟಿ ಸಾಲ ಮಾಡಿದ್ದಾರೆ. ನಮ್ಮ ಜಿಲ್ಲೆ ಮಳೆ-ಬೆಳೆಯಿಂದ ಸಮೃದ್ದಿಯಾಗಿತ್ತು. ಪುಣ್ಯಾತ್ಮರು ಕಾಲಿಟ್ಟಿದ್ದೇ, ಮಳೆ ಕೂಡ ಮಾಯವಾಗೋಯ್ತು ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles