ಧಾರವಾಡ : ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದರೆ ನಾನು ಚುನಾವಣೆಯಲ್ಲಿ ನಿಲ್ಲುವೆ ನಾನು ಎಂಪಿ ಟಿಕೆಟ್ ಆಕಾಂಕ್ಷಿ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಹೇಳಿದ್ದಾರೆ.
ನಗರದ ಸುದ್ಧಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹನುಮಂತಪ್ಪ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದ್ದು, ಮೈತ್ರಿಯಾದರೆ ನಾನು ಕೂಡ ಎಂಪಿ ಚುನಾವಣೆಯಲ್ಲಿ ನಿಲ್ಲುವೆ, ನಾನು ಕೂಡ ಎಂಪಿ ಟಿಕೆಟ್ ಆಕಾಂಕ್ಷಿ. ಈ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ ಎಂದರು.
ಇದನ್ನೂ ಓದಿ : ಎಲ್ಲದಕ್ಕೂ ರಾಜೀನಾಮೆಯೇ ಪರಿಹಾರವಲ್ಲ : ಸತೀಶ್ ಜಾರಕಿಹೊಳಿ
ಎಂಪಿ ಚುನಾವಣೆಯಲ್ಲಿ ಎಸ್ ಸಿ ಮೀಸಲಾತಿ ಇದಾವೆ. ರಾಜ್ಯದಲ್ಲಿ ಸ್ಪರ್ಧಿಸಲು ಕಲಬುರಗಿ, ವಿಜಯಪುರ, ಚಿತ್ರದುರ್ಗ ಹಾಗೂ ಕೋಲಾರ 4 ಸ್ಥಾನಗಳು ಇದ್ದು, ವಿಜಯಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಕೇಂದ್ರ ಸಚಿವರು ಇದ್ದಾರೆ. ಉಳಿದಿರುವುದು ಚಿತ್ರದುರ್ಗ ಹಾಗೂ ಕಲಬುರುಗಿ; ನಾನು ರಾಯಚೂರು ಭಾಗದವನು ಆಗಿರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಡಬೇಕು ಎಂದು ಪಕ್ಷದ ನಾಯಕರಿಗೆ ಒತ್ತಾಯ ಮಾಡುತ್ತೇನೆ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬರ ತಾಲೂಕುಗಳ ಘೋಷಣೆ : ಇಂದು ಸಂಪುಟ ಉಪ ಸಮಿತಿ ಸಭೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಕ್ಷೇತ್ರ ಕಲಬುರಗಿ ಜಿಲ್ಲೆ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಹನುಮಂತಪ್ಪ. ಸದ್ಯಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಉಮೇಶ ಜಾಧವ ಸಂಸದರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರು ಕಾಂಗ್ರೆಸ್ ಪಕ್ಷದಿಂದ ಸೋತಿದ್ದು, ಮೈತ್ರಿಯಿಂದ ಅನುಕೂಲವಾದ್ರೆ ಮಾಜಿ ಸಚಿವರಿಗೆ ರಾಜಕೀಯ ಅನುಕೂಲವಾಗುತ್ತೆ ಎನ್ನುವ ಲೆಕ್ಕಾಚಾರವೂ ಇದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.