Thursday, September 28, 2023
spot_img
- Advertisement -spot_img

ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಕಿಡಿಕಾರಿದ ಆರಗ ಜ್ಞಾನೇಂದ್ರ

ಶಿವಮೊಗ್ಗ : ಹಿಂದೂ ಧರ್ಮದಿಂದಲೇ ಎಲ್ಲಾ ಧರ್ಮ ಶಾಂತಿಯಿಂದ ನೆಲೆಗೊಂಡಿದೆ. ಆದರೂ ಕೂಡ ಹಿಂದೂ ಧರ್ಮದ ನಿರ್ನಾಮದ ಬಗ್ಗೆ ಮಾತನಾಡುತಾರೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ : ಫ್ಲ್ಯಾಟ್‌ ಹೆಸರಲ್ಲಿ ವಂಚನೆ ಕೇಸ್‌; ಸಂಸದೆ ನುಸ್ರತ್‌ಗೆ ಸಮನ್ಸ್‌

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಧರ್ಮದಿಂದಲೇ ಉಳಿದೆಲ್ಲಾ ಧರ್ಮ ಶಾಂತಿಯಿಂದ ಇವೆ. ದೇಶದಲ್ಲಿ ಶೇ.80 ಕ್ಕಿಂತ ಹೆಚ್ಚು ಜನ ಸನಾತನ ಧರ್ಮದವರು ಇದ್ದಾರೆ. ಆದರೂ ಕೂಡ ಹಿಂದೂ ಧರ್ಮದ ನಿರ್ನಾಮದ ಬಗ್ಗೆ ಮಾತಾನಾಡುತ್ತಾರೆ. ಮದವೇರಿದ ಪ್ರಾಣಿಗಳ ರೀತಿ ವರ್ತನೆ ಮಾಡುತಿದ್ದಾರೆ. ಇವರೆಲ್ಲಾ ವಿಕೃತ ಸ್ವಭಾವದವರು ಎಂದರು.

ಇದನ್ನೂ ಓದಿ : ‘ಒಕ್ಕೂಟಕ್ಕೆ ‘ಭಾರತ್’ ಎಂದು ಹೆಸರಿಟ್ಟರೆ ಅವರು ದೇಶಕ್ಕೆ ‘ಬಿಜೆಪಿ’ ಎನ್ನುತ್ತಾರೆಯೇ?’

ಇನ್ನು ಮುಂದುವರೆದು ಮಾತನಾಡಿದ ಅವರು, ಭಾವನಗಳಿಗೆ ಧಕ್ಕೆ ತಂದೂ ಬದುಕಬಹುದು ಎಂಬುದನ್ನು ಖಂಡಿಸುತ್ತೇನೆ. ಇಂತಹ ವಿಕೃತ ಮನಸ್ಸಿನವರೆಲ್ಲಾ ಸೇರಿ I.N.D.I.A. ಒಕ್ಕೂಟ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಕೇರಳ ಮುಸ್ಲಿಂ ಲೀಗ್ ನ ಸದಸ್ಯರು ಘೋಷಣೆ ಕೂಗಿದ್ದರು. ಹಿಂದುಗಳನ್ನು ಹೊಡೆದು, ದೇವಸ್ಥಾನದ ಮುಂದೆ ನೇಣಿಗೆ ಹಾಕಬೇಕು ಎಂದು ಕೂಗಿದರು.ಇಂತವರೆಲ್ಲಾ ಸೇರಿ ಮೋದಿ ಎದುರು ಒಕ್ಕೂಟ ಮಾಡಿಕೊಂಡಿದ್ದಾರೆ. I.N.D.I.A. ಒಕ್ಕೂಟದಲ್ಲಿನ ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳು ಉತ್ತರ ಕೊಡಲಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್‌ ರೇವಣ್ಣ ಅನರ್ಹ; ವಿಚಾರಣೆ ಮುಂದೂಡಿದ ಹೈಕೋರ್ಟ್‌

ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ತಮಿಳುನಾಡಿನ ಸಿಎಂ ಪುತ್ರ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಅದನ್ನು ಕೊರೊನ ವೈರಸ್, ಡೆಂಗ್ಯೂ ಹಾಗೂ ಮಲೇರಿಯಾಕ್ಕೆ ಹೋಲಿಸಿದ್ದರು. ಈ ಹೇಳಿಕೆ ದೇಶದಾದ್ಯಂತ ವ್ಯಾಪಕವಾಗಿ ಚರ್ಚೆಗೆ ಗುರಿಯಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles