Monday, December 4, 2023
spot_img
- Advertisement -spot_img

‘ಕುಮಾರಸ್ವಾಮಿ ನಾನು ಆತ್ಮೀಯ ಸ್ನೇಹಿತರು’

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನ ಆತ್ಮೀಯ ಸ್ನೇಹಿತರು. ಮೊನ್ನೆ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಬಳ್ಳಾರಿಯಲ್ಲಿ ಮನೆದೇವರ ಪೂಜೆ ಮಾಡುವ ಸಮಯದಲ್ಲಿ ಫೋನ್ ಮಾಡಿ, ಎಲ್ಲರೂ ಬಂದಿದ್ದರು ನೀವು ಬಂದಿಲ್ಲ ಎಂದು ಕರೆ ಮಾಡಿ ಕೇಳಿದ್ದರು. ಬನ್ನಿ ಬೆಂಗಳೂರಿಗೆ ಮಾತಾಡೋಣ ಎಂದು ಹೇಳಿದಕ್ಕೆ ಹೋಗಿ ಬಂದಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೆಚ್‌ಡಿಕೆ ಭೇಟಿಯ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ. ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಬಿಜೆಪಿ-ಜೆಡಿಎಸ್ ನಿಂದ ಒಳ್ಳೆಯದಾಗುತ್ತದೆ ಎಂದು ಹೇಳಿದ್ದೇನೆ. ಮೈತ್ರಿ ಕುರಿತಂತೆ ಕುಮಾರಸ್ವಾಮಿ ಅವರ ಬಳಿ ಏನು ಮಾತನಾಡಿಲ್ಲ. ಎಲ್ಲವನ್ನೂ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಸಿಬಿಐ/ಎಸ್​ಐಟಿಗೆ ವಹಿಸುವಂತೆ ಕೋರ್ಟ್ ಹೇಳಿದೆ’ : ಮಣಿ ಸರ್ಕಾರ್

ಚೈತ್ರ ಕುಂದಾಪುರ ಪ್ರಕರಣದಲ್ಲಿ ಆರ್‌ ಎಸ್ ಎಸ್ ಮುಖಂಡರ ಹೆಸರು ಪ್ರಸ್ತಾಪದ ಬಗ್ಗೆ ಮಾತನಾಡಿದ ಈಶ್ವರಪ್ಪ, ಅದು  ಇಡೀ ದೇಶಕ್ಕೆ ರಾಷ್ಟ್ರಭಕ್ತ ಸಂಘಟನೆ. ಯಾರೋ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲು ಸಾಧ್ಯವಿಲ್ಲ. ಇದರಲ್ಲಿ ತನಿಖೆಯಾಗಲಿ, ಪ್ರಕರಣದಲ್ಲಿ ಯಾರ‍್ಯಾರು ಇದ್ದಾರೆ ಅವರೆಲ್ಲ ಹೊರಗೆ ಬರುತ್ತಾರೆ ಎಂದರು.

ರಾಜ್ಯದ ಇತಿಹಾಸದಲ್ಲಿ ಈ ರೀತಿಯ ಬರ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲು ತಡವಾಗಿದೆ. ಈಗಲೂ ಕೂಡ ಸರ್ಕಾರ ಬೇಗ ಸರ್ವೇ ಮಾಡಿಸಿ ಏನೇನು ಮಾಡಬೇಕು ಅದನ್ನು ಮಾಡಲಿ. ಬೆಳೆ ಪರಿಹಾರ ಎಲ್ಲವನ್ನು ನೀಡಲಿ ಎಂದು ಒತ್ತಾಯಿಸಿದರು.

ಬರ ನಿರ್ವಹಣೆಯ ವಿಷಯದಲ್ಲಿ ಕೇಂದ್ರಕ್ಕೂ ತಕ್ಷಣ ಮನವಿ ಕಳುಹಿಸಿ, ಅಲ್ಲಿಂದಲೂ ಹಣ ತರಿಸಿಕೊಳ್ಳಲಿ. ಇವರು ತಡ ಮಾಡುತ್ತಿರುವುದರಿಂದ ರಾಜ್ಯದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ರಾಜ್ಯದ ರೈತರಿಗೆ ಅನ್ಯಾಯಾಗಲು ಬಿಡಬೇಡಿ ನಿಮ್ಮ ಪ್ರಯತ್ನದಿಂದ ನಿಮ್ಮ ಕರ್ತವ್ಯವೇನು ನಿಭಾಯಿಸಿ ಎಂದು ಈಶ್ವರಪ್ಪ ಸರ್ಕಾರಕ್ಕೆ ಸಲಹೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles