Wednesday, November 29, 2023
spot_img
- Advertisement -spot_img

‘ದೇಶದ ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯಲು ಹೋಗಿ ಕಾಂಗ್ರೆಸ್ ನೆಲಕಚ್ಚಿದೆ’

ಹಾಸನ: ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಬಂದಿರುವುದು ದೇವೇಗೌಡರ ಕುಟುಂಬವಾಗಿದೆ. ಇಡೀ ದೇಶದ ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯಲು ಹೋಗಿ ಕಾಂಗ್ರೆಸ್ ನೆಲಕಲಚ್ಚಿದೆ. 300 ಸೀಟ್ ಇದ್ದಂತಹ ಕಾಂಗ್ರೆಸ್ 40 ಸೀಟಿಗೆ ಬಂದಿದೆ. ಕಾಂಗ್ರೆಸ್‌ಗೆ ಪ್ರಧಾನಿ ಮೋದಿಯವರೇ ದರ್ಪಣ ಬಿಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುಟುಂಬ ಅಧಿಕಾರಕ್ಕಾಗಿ ಆಸೆ ಪಡುವುದಾಗಿದ್ದರೆ. ಅವತ್ತೇ ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಬೆಳ್ಳಗೆನೇ ಚೀಫ್ ಮಿನಿಸ್ಟರ್ ಆಗಬಹುದಿತ್ತು ಎಂದು ಅಧಿಕಾರ ದಾಹದ ಬಗ್ಗೆ ಆರೋಪಿಸಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಡಾ.ಯತೀಂದ್ರ ವಿಡಿಯೋ ವೈರಲ್ ವಿಚಾರ: ‘AI ಟೆಕ್ನಾಲಜಿ ಬಂದಿದೆ ಏನ್ ಬೇಕಾದ್ರು ಆಗಬಹುದು

ನಿಮ್ಮಪ್ಪನ್ನ ಮುಗಿಸಿರುವ ಕಾಂಗ್ರೆಸ್‌ ಪಕ್ಷವನ್ನು ಯಾಕೆ ನಂಬುತ್ತೀರಿ? ಈಗ ರಾಜೀನಾಮೆ ಕೊಡು ಇನ್ನು ಐದು ವರ್ಷ ನೀವೇ ಚೀಫ್ ಮಿನಿಸ್ಟರ್ ಎಂದು ಆಗ ಕುಮಾರಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದ್ದರು ಎಂದು ರೇವಣ್ಣ ಹೇಳಿದ್ದಾರೆ.

ದೇವೇಗೌಡರಿಗೆ ದೈವಬಲ ಇದೆ, ಅವರು ಬದುಕಿರುವವರೆಗೆ ಜೆಡಿಎಸ್ ನ ಯಾರು ಏನೂ ಮಾಡಲಾಗುವುದಿಲ್ಲ. ಜೆಡಿಎಸ್ ಪಕ್ಷ ಈ ರಾಜ್ಯದಲ್ಲಿ ರಾಜಕೀಯ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆಯಾಗಿದೆ. 2028ಕ್ಕೆ ಜೆಡಿಎಸ್ ಏನೆಂದು ತೋರಿಸುತ್ತೇವೆ. ಈ ಕಾಂಗ್ರೆಸ್ ನೆಹರು ಕಾಲದ್ದಲ್ಲ, ರಾಜೀವ್ ಗಾಂಧಿ ಕಾಂಗ್ರೆಸ್ಸು ಅಲ್ಲ, ಇದು ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಗೂಟಾವೊಡೆಯುವ ಕಾಂಗ್ರೆಸ್ ಎಂದು ಲೇವಡಿ ಮಾಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles