Monday, December 4, 2023
spot_img
- Advertisement -spot_img

ಹಾವೇರಿ ಲೋಕಸಭಾ ಕ್ಷೇತ್ರ : ಟಿಕೆಟ್‌ಗಾಗಿ ಮಾಜಿ ಸಚಿವದ್ವಯರ ಫೈಟ್!

ಹಾವೇರಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ.

ಈ ಹಿಂದೆಯೂ ಬಹಿರಂಗವಾಗಿ ತಮ್ಮ ಮಗ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಈಶ್ಚರಪ್ಪ ಹೇಳಿದ್ದರು. ಇದರ ಬೆನ್ನೆಲ್ಲೇ ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು.

ಇದನ್ನೂ ಓದಿ : ‘ಬಿಜೆಪಿ ಕಾರ್ಯಕರ್ತರ ಮೇಲೆ ನಿಂತಿರುವ ಪಕ್ಷ’

ಈ ಲೋಕಸಭಾ ಟಿಕೆಟ್ ಗಾಗಿ ಈಶ್ವರಪ್ಪ ಹಾಗೂ ಮಾಜಿ ಸಚಿವ ಬಿಸಿ ಪಾಟೀಲ್ ನಡುವೆ ಫೈಟ್ ಶುರುವಾಗಿದೆ. ಸ್ವಪಕ್ಷದ ಬೆಂಬಲವಿಲ್ಲದೆ ಬೇರೆ ನಾಯಕನ ಮೂಲಕ ಲಾಭಿಗೆ ಈಶ್ವರಪ್ಪ ಇಳಿದಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

ಬಿಜೆಪಿ ಜೆಡಿಎಸ್ ಮೈತ್ರಿ ಗುಟ್ಟು ರಟ್ಟಾದ ಕೂಡಲೇ ಮಗನನ್ನು ಸಂಸದನನ್ನಾಗಿಸುವವ ಈಶ್ವರಪ್ಪ ಅವರ ಕನಸು ಮತ್ತೆ ಚಿಗುರೊಡೆದಿದ್ದು, ಟಿಕೆಟ್ ಪಡೆಯುವ ಆಸೆ ಹಿನ್ನೆಲೆ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಭೇಟಿಯಾಗಿ ಬ್ರೇಕ್ ಫಾಸ್ಟ್‌ ಮೀಟಿಂಗ್‌ನಲ್ಲೆ ಈ ಕುರಿತ ಮಹತ್ವದ ಚರ್ಚೆ ನಡೆದಿದೆಯಾ ಎಂಬ ಶಂಕೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ಮೂಲಕ ಮಗನ ಭವಿಷ್ಯಕ್ಕಾಗಿ ಜೆಡಿಎಸ್ ಮೊರೆ ಹೋಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಹಿನ್ನೆಲೆ ಎಚ್.ಡಿ.ಕುಮಾರಸ್ವಾಮಿ ಮೂಲಕ ಲಾಬಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೆ.ಪಿ ನಗರದ ನಿವಾಸದಲ್ಲಿ ಈ ಬಗ್ಗೆ ಮಹತ್ವದ ಮಾತುಕತೆ ನಡೆದಿದೆಯಾ ಎಂಬ ಪ್ರಶ್ನೆಗಳು ಮೂಡಿವೆ.

ಅತ್ತ ಹೈಕಮಾಂಡ್ ಮಟ್ಟದಲ್ಲಿ ದೇವೇಗೌಡರು ಮತ್ತು ಬಿಜೆಪಿ ನಾಯಕರು ಟಿಕೆಟ್ ಚರ್ಚೆ ಮಾಡಿದರೆ. ಇತ್ತ ಲಿಂಗಾಯತ ಮತಗಳೆ ಮುಖ್ಯವಾಗಿರುವ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯೇ ಸೂಕ್ತ ಎನ್ನುತ್ತಿವೆ ಮೂಲಗಳು. ಸದ್ಯ ಬಿಸಿ ಪಾಟೀಲ್ ಮತ್ತು ಈಶ್ವರಪ್ಪ ಪುತ್ರ ಕಾಂತೇಶ್ ನಡುವೆ ಟಿಕೆಟ್ ಫೈಟ್ ನಡೆದಿದ್ದು, ಲಿಂಗಾಯತರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕುರುಬರಿಗೆ ಹೇಗೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡುತ್ತಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಚುನಾವಣೆಗೆ ಸ್ಫರ್ಧಿಸಲ್ಲ ಎಂದಿದ್ದ ಶಿವಕುಮಾರ್ ಉದಾಸಿ..

ಹಾಲಿ ಸಂಸದ ಶಿವಕುಮಾರ್ ಉದಾಸಿಯವರು ಮುಂಬರುವ ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುವುದಿಲ್ಲ ಎಂದು ಕಳೆದ ಜೂನ್ ತಿಂಗಳಲ್ಲಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ನತ್ತ ಹಲವು ನಾಯಕರು ದಿನಗಳು ಕಳೆದಂತೆ ಚಿತ್ತ ಹರಿಸುತ್ತಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles