ಉಡುಪಿ: ಕಾರ್ಕಳ ಪ್ರವಾಸೋದ್ಯಮವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಕೆಲಸಗಳನ್ನು ತಾನು ಸಚಿವನಾಗಿದ್ದ ವೇಳೆ ಮಾಡಿದ್ದೆ, ಆದರೆ ಕೆಲವು ದಿನಗಳಿಂದ ಅಭಿವೃದ್ಧಿಯನ್ನು ಅಪಹಾಸ್ಯ ಮಾಡುವ ಕೆಲಸ ಕೆಲವರಿಂದ ನಡೆಯುತ್ತಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ವಿ ಕಾರ್ಕಳ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮವಾಗಿ ಕಾರ್ಕಳ ಗುರುತಿಸಲ್ಪಡಬೇಕು, ಉಡುಪಿ ಜಿಲ್ಲೆಗೆ ಬರುವ ಪ್ರವಾಸಿಗರು ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಗೆ ಬರುವಂತಾಗಬೇಕು ಇದರ ಪ್ರಸಿದ್ಧತೆ ಎಲ್ಲ ಕಡೆ ಪಸರಿಸುವುದೇ ನಮ್ಮ ಉದ್ದೇಶವಾಗಿತ್ತು, ಇದ್ರ ನೇತೃತ್ವವನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ಉದಯ ಶೆಟ್ಟಿ ಮುನಿಯಾಲು ವಹಿಸಿಕೊಂಡಿದ್ದು, ಪರಶುರಾಮ ಥೀಂ ಪಾರ್ಕ್ ನ ಗುಣಮಟ್ಟ ವಿಚಾರವಾಗಿ ಆರೋಪಗಳು ಕೇಳಿಬರುತ್ತಿದೆ, ಈ ನಿಟ್ಟಿನ ಯಾವುದೇ ತನಿಖೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಇದನ್ನೂ ಓದಿ : ಜಿ20ಗೆ ನನಗೆ ಆಹ್ವಾನ ಬಂದಿಲ್ಲ : ಮಲ್ಲಿಕಾರ್ಜುನ ಖರ್ಗೆ
ಪರಶುರಾಮ ಥೀಂ ಪಾರ್ಕ್‌ಗೆ ನಾನು ಗುತ್ತಿಗೆದಾರನು ಅಲ್ಲ, ಅದು ನನ್ನ ಆಸ್ತಿಯು ಅಲ್ಲ, ಪರಶುರಾಮ ಥೀಂ ಪಾರ್ಕ್ ಪರಶುರಾಮ ಪ್ರತಿಮೆ ಪ್ರವಾಸೋದ್ಯಮ ದೃಷ್ಟಿಯಿಂದ ನಿರ್ಮಾಣವಾಗಿರೋದು, ಏಳೆಂಟು ವರ್ಷಗಳಿಂದ ಈ ಬಗ್ಗೆ ಚಿಂತನೆ ನಡೆಸಲಾಗಿದೆ, ಇದೀಗ ಪರಶುರಾಮ ಪಾರ್ಕ್ ನ ಗುಣಮಟ್ಟದ ವಿಚಾರದ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ.
ಕಾಂಗ್ರೆಸ್ ನ ಕೆಲವರು ಇದಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಪರಶುರಾಮ ಕಾಮಗಾರಿ ನಿಲ್ಲಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸಿ, ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.