ಉಡುಪಿ : ಬಿಜೆಪಿ ಹೆಸರಿನಲ್ಲಿ ಯಾರಿಗೆ ಯಾರೂ ಕೂಡ ಮೋಸ ಮಾಡಬಾರದು ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಕಿಡಿಕಾರಿದರು.
ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣದ ವಿಚಾರವಾಗಿ ನಗರದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ಯಾರ ಮುಖ ಪರಿಚಯ ನನಗೆ ಇಲ್ಲ, ನಾನು ಯಾರ ಜೊತೆಗೂ ನಾನು ಫೋನಲ್ಲಿ ಮಾತಾಡಿಲ್ಲ, ಆಕಸ್ಮಿಕವಾಗಿ ಶುಭ ಸಮಾರಂಭ ಕಾರ್ಯಕ್ರಮಗಳಲ್ಲೂ ಕೂಡ ಭೇಟಿ ಆಗಿಲ್ಲ ಎಂದರು.
ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತೆ ಅನ್ನೋದು ಒಂದು ಭ್ರಮೆ, ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು ನಾಲ್ಕು ಬಾರಿ ಗೆದ್ದು ಬರೋದಕ್ಕೆ ಸಾಧ್ಯ ಆಗುತ್ತಿರಲಿಲ್ಲ , ರಾಜಕಾರಣಿಗಳ ಹೆಸರು ಹೇಳಿ ಹಣದ ದುರುಪಯೋಗ ಮಾಡುತ್ತಾರೆಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶಿಸಿದರು.
ಈ ಘಟನೆಯ ತಾರ್ಕಿಕ ಅಂತ್ಯಕ್ಕೆ ಪೊಲೀಸ್ ಇಲಾಖೆ ತೆಗೆದುಕೊಂಡು ಹೋಗಬೇಕು , ಘಟನೆಯ ಹಿಂದೆ ಯಾರಿದ್ದಾರೆ, ಯಾರು ದುರುಪಯೋಗ ಮಾಡುತ್ತಾರೆ ಅಂತವರನ್ನ ಸಂಪೂರ್ಣವಾಗಿ ಮಟ್ಟ ಹಾಕಬೇಕು ರಾಜಕಾರಣಿಯ ಹೆಸರು ಹೇಳಿ ಪಕ್ಷದ ಹೆಸರು ಹೇಳಿ ಹಣ ಸಂಗ್ರಹ ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ , ಈ ಘಟನೆಯೇ ಅಂತ್ಯ ಆಗಬೇಕು ಅಂತಹ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ನಾಳೆ ಕುರುಡುಮಲೆಗೆ ಬಿಎಸ್‌ವೈ; ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ
ನನಗೆ ಯಾವುದೇ ಸಂಬಂಧ ಇಲ್ಲದ ಘಟನೆ ಇದು ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು. ಇದರ ಹಿಂದೆ ಯಾರು ಯಾರು ಫೋನ್ ಸಂಪರ್ಕ ಮಾಡಿದ್ದಾರೆ, ಅಂತಹವರನ್ನು ಮಟ್ಟ ಹಾಕಬೇಕು ಎಂದು ಹರಿಹಾಯ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.