ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಟಿ.ಬಿ. ಜಯಂಚಂದ್ರ, ಈ ಕೇಸ್ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಈ ಸಂಬಂಧ ಸರ್ವಪಕ್ಷ ಸಭೆ ಕರೆಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ಹೇಳಿದ್ದೇ ನನ್ನ ಹೇಳಿಕೆ ಕೂಡ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಖರ್ಚು ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ 20 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಯೋಜನೆ. ಏಳು ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಬಜೆಟ್‌ನಲ್ಲಿ 5,000 ಕೋಟಿ ಕೊಡುತ್ತೇವೆ ಎಂದಿದ್ದಾರೆ. ಹಾಗಾಗಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನೈಸ್ ವರದಿ ಕೊಟ್ಟ ಮೇಲೆ ಮುಗೀತು: ನೈಸ್ ಹಗರಣ ಸಂಬಂಧ ನಾಳೆ ಹೆಚ್.ಡಿ.ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಯಚಂದ್ರ, ವರದಿ ಕೊಟ್ಟ ಮೇಲೆ ಮುಗಿದೋಯ್ತು. 2016ರ ಡಿಸೆಂಬರ್‌ನಲ್ಲೇ ವರದಿ ಕೊಟ್ಟಿದ್ದೇನೆ. ಮೂರು ಪಕ್ಷಗಳ ಶಾಸಕರು ಕುಳಿತು ವರದಿ ಕೊಟ್ಟಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯಿಸಿದ್ರು. ಸರ್ಕಾರ ಕೂಡ ಅದಕ್ಕೆ ಉತ್ತರ ಕೊಟ್ಟಿದೆ. ನಮ್ಮ ವರದಿ ಮೇಲೆ ಸರ್ಕಾರ ಕ್ರಮ ಜರುಗಿಸಬೇಕು ಎಂದರು.
ಇದನ್ನೂ ಓದಿ: ಅಮೇರಿಕಾದಲ್ಲಿ ಕೃಷಿ ಅಧ್ಯಯನ ನಡೆಸಿದ ಸವದಿ
ನಾನು ಐದು ವರ್ಷ ಕಳೆದುಹೋಗಿದ್ದೆ. ಇದೀಗ ವಿಧಾನಸೌಧದಲ್ಲಿ ಪ್ರತ್ಯಕ್ಷನಾಗಿದ್ದೇನೆ. ದೆಹಲಿಯಲ್ಲಿ ನಮ್ಮ ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದೇನೆ. ಕೇಂದ್ರ,ರಾಜ್ಯದಲ್ಲಿ ಬೇರೆ ಸರ್ಕಾರಗಳಿವೆ. ಹಾಗಾಗಿ ಎರಡೂ ಕಡೆ ಸೇತುವೆಯಾಗಿದ್ದೇನೆ. ಎಷ್ಟು ಹಣ ಬಿಡುಗಡೆಯಾಗಿದೆ? ಎಷ್ಟು ಹಣ ಖರ್ಚಾಗಿದೆ? ಎಂಬುದನ್ನು ನೋಡುತ್ತಿದ್ದೇನೆ. ಮೂರು ಹಂತಗಳಲ್ಲಿ ಕೇಂದ್ರ ಹಣ ಬಿಡುಗಡೆ ಮಾಡುತ್ತದೆ. ಹಣ ಬಿಡುಗಡೆಗೆ ನಾವು ಒತ್ತಡ ಹಾಕಬೇಕಾಗುತ್ತದೆ. ಆ ಕೆಲಸವನ್ನ ನಾನು ಮಾಡಬೇಕಾಗುತ್ತದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.