ಹಾಸನ: ಬಿ.ವೈ ವಿಜಯೇಂದ್ರ ಅವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ಬಹಳ ಸಂತೋಷದ ವಿಚಾರವಾಗಿದೆ ಎಂದು ಮಾಜಿ ಸಚಿವ ವಿಜಯ್ ಶಂಕರ್ ಹೇಳಿದ್ದಾರೆ.
ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನದ ಬಳಿಕ ಮಾತನಾಡಿದ ವಿಜಯ್ ಶಂಕರ್, ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ಬಹಳ ಸಂತೋಷದ ವಿಚಾರ.
ದೀಪಾವಳಿ ಸಂದರ್ಭದಲ್ಲಿ ಬಿಜೆಪಿ ಕೂಡ ಪ್ರಜ್ವಲವಾಗಿದೆ. ಬುಧವಾರದಂದು ಪಕ್ಷದ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಇದ್ದು, ನಾವೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದೇವೆ. ಅವರು ಕೇವಲ ಯುವ ನಾಯಕರು ಅಲ್ಲ. ಭವಿಷ್ಯದ ನಾಯಕರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಎಂ ತವರೂರಿನಲ್ಲೇ ಅನ್ನಭಾಗ್ಯ ಯೋಜನೆಯ ದುರುಪಯೋಗ
ರಾಜ್ಯಾಧ್ಯಕ್ಷರ ನೇಮಕದಿಂದ ಮತ್ತೆ ರಾಜ್ಯಾದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತಹ ಮುಂಚೂಣಿಯಲ್ಲಿದ್ದುಕೊಂಡು ಕೆಲಸ ಮಾಡಬೇಕಾಗಿದೆ. ಪಕ್ಷಕ್ಕೆ ಹೊಸ ಚೈತನ್ಯ ಮತ್ತು ಶಕ್ತಿಯನ್ನು ತುಂಬುವಂತಹ ಒಂದು ಯುವ ಶಕ್ತಿ ಲಭ್ಯವಾಗಿದೆ. ಈಗಾಗಲೇ ವಿಜಯೇಂದ್ರ ಅವರಿಗೆ ಶುಭ ಹಾರೈಸಲಾಗಿದ್ದು, ಪೂರ್ತಿ ನಾಡು ಅವರಿಗೆ ಯಶಸ್ಸನ್ನು ಬಯಸಿದೆ. ಸಾಮಾನ್ಯ ಕಾರ್ಯಕರ್ತ ಮತ್ತು ಸಾಮಾನ್ಯ ಜನರಲ್ಲಿ ಭಾರತೀಯ ಜನತಾ ಪಾರ್ಟಿ ಸಕಾಲದಲ್ಲಿ ಒಳ್ಳೆಯ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿರುವ ಅತ್ಯಂತ ಪುರಾತನವಾದ ಹಾಸನಾಂಬೆ ದೇವಸ್ಥಾನದ ದೇವಿ ದರ್ಶನಕ್ಕಾಗಿ ನಾವು ಕುಟುಂಬ ಸಮೇತವಾಗಿ ಬಂದಿದ್ದು, ಕಳೆದ ಹತ್ತಾರು ವರ್ಷಗಳಿಂದ ತಾಯಿ ದರ್ಶನ ಮಾಡಲಾಗುತ್ತಿರುವುದು ನನಗೆ ಯಾವುದೊ ಜನ್ಮದ ಪುಣ್ಯ. ನವರಾತ್ರಿ ಮುಗಿದು ದೀಪಾವಳಿ ಬರುವ ಕಾಲಘಟ್ಟದಲ್ಲಿ ಹಾಸನಾಂಬೆ ದೇವಿ ಗರ್ಭಗುಡಿ ತೆಗೆಯಲಾಗುತ್ತದೆ. ಹಾಸನಂಬೆ ದೇವಿ ವಿಶೇಷ ಏನೆಂದರೇ ಜ್ಯೋತಿ ರೂಪದಲ್ಲಿ ಕಾಣಿಸಿಕೊಳ್ಳುವಂತದಾಗಿದೆ. ಒಂದು ಬಾರಿ ಹಚ್ಚಿದ ದೀಪ ಮುಂದೆ ಬರುವ ವರ್ಷದವರೆಗೂ ಹಾರದೆ ಉರಿಯುತ್ತಿರುತ್ತದೆ. ತಾಯಿ ಇರುವುದು ಸತ್ಯ. ಬಾಡದ ಹೂವು ನೋಡಿದರೇ ದೇವಿಯಲ್ಲಿರುವ ಶಕ್ತಿ ಮತ್ತು ಪವಾಡವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕುರುಡುಮಲೆ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಬಿಜೆಪಿ ರಾಜ್ಯಾಧ್ಯಕ್ಷ
ದೇವಿ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಯಿಂದ ಪ್ರವಾಹದಂತೆ ಜನ ಆಗಮಿಸುತ್ತಿದ್ದಾರೆ. ತಾಯಿ ಅನುಗ್ರಹ ನಮಗೆ ಆಗಬೇಕು. ಸಮಾಜಕ್ಕೆ ಬಂದಿರುವ ಅನಿಷ್ಠಗಳು, ಅಮಂಗಲಗಳು ದೂರ ಆಗಬೇಕು. ಮಂಗಳಕರ ವಾತವರಣ ನಿರ್ಮಾಣವಾಗಬೇಕು. ಸಕಾಲದಲ್ಲಿ ಮಳೆಯಾಗಿ ನಾಡು ಸಂಬೃದ್ಧಿಯಾಗಿ ರೈತರಲ್ಲಿ ಹರ್ಷ ಕಂಡುಬರಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.