ಶಿವಮೊಗ್ಗ : ದೇಶವನ್ನು ಭಾರತ್ ಎಂದು ಗುರುತಿಸುತಿದ್ದಂತೆ, ಆ ಹೆಸರಿನ ಬಗ್ಗೆ ಅಪನಂಬಿಕೆ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿಯವರು ಪ್ರಧಾನಿ ಆಗುವ ಮುಂಚೆ ದೇಶ ಹತ್ತನೇ ಆರ್ಥಿಕ ಶಕ್ತಿಯಾಗಿತ್ತು.ಈಗ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿದೆ. ಯಾರು ತಮ್ಮನ್ನು ತಾವು ಸೂರ್ಯ ಮುಳುಗದ ಸಾಮ್ರಾಜ್ಯ ಅಂತ ಭಾವಿಸಿದ್ದಾರೋ ಅವರಿಗೆ ಮೆಕಾಲೆಯೇ ಅತ್ಯಂತ ದೊಡ್ಡ ಶಿಕ್ಷಣ ತಜ್ಞ ಎಂಬುದಾಗಿ ಕಾಣುತ್ತಾನೆ. ಆದರೆ ಇಂದು ಭಾರತ ತನ್ನ ಜಾಗತಿಕ ಶಕ್ತಿಯನ್ನು ಗುಲಾಮಿ ಮಾನಸಿಕತೆಯಿಂದ ಹೊರಬಂದು ತೋರಿಸಿಕೊಟ್ಟಿದೆ. ದೇಶಕ್ಕೆ ಭಾರತ್ ಎಂದು ಕರೆಯುತಿದ್ದಂತೆ, ಅಪನಂಬಿಕೆಗಳು, ಅನುಮಾನಗಳು ಶುರುವಾಗಿದೆ. ಈಗ ಕಾಲೆಳೆಯುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ : ‘KSRTC ಸೇರಿ ಇತರೆ ನಿಗಮಗಳಿಗೆ 13,000 ಸಿಬ್ಬಂದಿ ನೇಮಕ, 4,000 ಬಸ್ ಖರೀದಿ’
ಮಾತು ಮುಂದುವರಿಸಿದ ಅವರು, ಗುಲಾಮಿ ಮಾನಸಿಕತೆಯಿಂದ ಕಾಂಗ್ರೆಸ್ ಅನ್ನು ಹೊರ ತರುವ ಜವಾಬ್ದಾರಿ ನಮ್ಮ ಮೇಲಿದೆ. ಏಕೆಂದರೆ ಆ ಮಾನಸಿಕತೆ ಇದ್ದರೆ ಅವರಿಗೂ ಒಳ್ಳೆಯದಲ್ಲ, ದೇಶಕ್ಕೂ ಒಳ್ಳೆಯದಲ್ಲ. ಹೀಗಾಗಿ ವ್ಯಕ್ತಿಗೆ ಒಂದು ಆತ್ಮವಿದೆ ಹಾಗೆಯೆ ದೇಶಕ್ಕೂ ಅಸ್ಮಿತೆ ಎಂಬ ಒಂದು ಆತ್ಮವಿದೆ. ಭಾರತೀಯತೆ ಈ ದೇಶದ ಆತ್ಮ. ಈ ಮೂಲಕ ದೇಶಕ್ಕೆ ಭಾರತ್ ಎಂಬ ಹೆಸರನ್ನು ಸ್ವಾಗತಿಸಿಕೊಂಡಿದ್ದಾರೆ.
ಇದನ್ನೂ ಓದಿ : ಸಿದ್ಧಾಂತಕ್ಕೂ ಜನರ ಭಾವನೆಗಳಿಗೂ ಬಹಳ ವ್ಯತ್ಯಾಸವಿದೆ : ಸಿದ್ದುಗೆ ಕುಟುಕಿದ ದಳಪತಿ
ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ ಬಗ್ಗೆ ಮಾತನಾಡಿದ ರವಿ ಅವರು, ಕಾಂಗ್ರೆಸ್ ಪಕ್ಷದ ಒಳಗೆ ಭೂಕಂಪನದ ಮುನ್ಸೂಚನೆ ಕಾಣುತಿದೆ. ಸಮಾಜವಾದ, ಪಂಚೆ, ಕಾರು ಅಂತ ಹೇಳುವ ಜೊತೆಗೆ ಹಿಂದುತ್ವವಾದಿ, ದಡ್ಡ ಅಂದ್ರೆ ಸಿಟಿ ರವಿ ಅಂದಿದ್ದಾರೆ. ಆದರೆ ಹರಿಪ್ರಸಾದ್ ಸಮಾಜವಾದಿ ಹಾಗೂ ಪಂಚೆ ಎಂದು ಹೇಳಿದ್ದು ಯಾರಿಗೆ ಅಂತ ಗೊತ್ತಾಗಿಲ್ಲ. ಎಂದು ಕಾಂಗ್ರೆಸ್ ನಾಯಕರ ಒಳಗಿನ ಮನಸ್ತಾಪದ ಬಗ್ಗೆ ವ್ಯಂಗ್ಯವಾಗಿ ಮಾತನಾಡಲಿದ್ದಾರೆ.
ಇದನ್ನೂ ಓದಿ : ಬಂದ್‌ಗೆ ಸೆಡ್ಡು ಹೊಡೆದ ಬಿಎಂಟಿಸಿ : ಹೆಚ್ಚುವರಿ ಬಸ್ ರಸ್ತೆಗಿಳಿಸಲು ನಿರ್ಧಾರ
ಕಾಂಗ್ರೆಸ್ ಆಡಳಿತ ಬಗ್ಗೆ ಮಾತನಾಡಿದ ಅವರು, ಐದು ವರ್ಷ ಒಳ್ಳೆಯ ಆಡಳಿತ ನೀಡುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ, ಅಧಿಕಾರಕ್ಕೆ ಬಂದಂತೆ ಗ್ಯಾರಂಟಿಗಳನ್ನು ಕೊಟ್ಟು ವಿದ್ಯುತ್ ಬಿಲ್, ಮುದ್ರಾಂಕ ಶುಲ್ಕ, ಬಸ್ ದರ, ಎಣ್ಣೆ ದರವೂ ಏರಿಸಿದ್ದಾರೆ. ಆದ್ರೆ ಸಿಂಗಲ್ ಫೇಸ್ ಕರೆಂಟ್ ಕೂಡ ಬರ್ತಿಲ್ಲ ಎಂದು ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕಿಡಿ ಕಾರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.