ದಾವಣಗೆರೆ : ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮವಾಗಿ ಆಸ್ತಿ ಹಾಗೂ ಅವರ ಪುತ್ರನ ಲಂಚ ಪಡೆದಿದ್ದಾರೆ ಎಂಬ ಪ್ರಕರಣವನ್ನು ಸಿಬಿಐ ಅಥವಾ ಎಸ್ ಐ ಟಿ ಗೆ ವಹಿಸುವಂತೆ ಕೋರ್ಟ್ ತಿಳಿಸಿದೆ ಎಂದು ಶ್ರೀರಾಮ್ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಹೇಳಿದ್ದಾರೆ.
ನಗರದ ಸುದ್ಧಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದಲ್ಲಿ 8 ಕೋಟಿ ಪತ್ತೆಯಾಗಿತ್ತು ಹಾಗೂ ಅವರ ಪುತ್ರ ಪ್ರಶಾಂತ್ ಲಂಚ ಪಡೆದಿದ್ದಾರೆ ಎಂಬ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆವು. ಇದರ ಬಗ್ಗೆ ತನಿಖೆಯಾಗಿ ಇವಾಗ ಹೈಕೋರ್ಟ್ ದ್ವಿ ಸದಸ್ಯ ಪೀಠ ಕೇಸ್ ನ ಮಾಹಿತಿಯನ್ನು ಸಿಬಿಐ ಅಥವಾ ಎಸ್ ಐ ಟಿ ಗೆ ವಹಿಸಲು ರಾಜ್ಯ ಸರ್ಕಾರಕ್ಕೆ ತಿಳಿಸಿದೆ ಎಂದರು.
ಇದನ್ನೂ ಓದಿ : ‘ಚೈತ್ರಾ ಕುಂದಾಪುರ ಕೇಸ್‌ನಲ್ಲಿರುವ ಎಲ್ಲರಿಗೂ ಉಗ್ರ ಶಿಕ್ಷೆಯಾಗಲಿ’
ಇನ್ನು ಮುಂದುವರೆದು ಮಾತನಾಡಿದ ಅವರು, ಅಕ್ರಮವಾಗಿ ಆಸ್ತಿ ಹಾಗೂ ಹಣ ಸಂಪಾದನೆ ಬಗ್ಗೆ ನಮ್ಮ ಬಳಿ ದಾಖಲೆಗಳಿದ್ದು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ, ಸುಮಾರು 2 ಸಾವಿರ ಕೋಟಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಇದೀಗ ಸರ್ಕಾರ ತನಿಖೆಗೆ ಆದೇಶ ಮಾಡಿದ್ದು, ಮಾಡಾಳ್ ಅವರು ಸಲ್ಲಿಸಿದ್ದ ಜಾಮೀನು ಕೂಡ ರದ್ದಾಗಿದೆ. ಇದರಿಂದ ಮಾಡಾಳ್ ಕುಟುಂಬಕ್ಕೆ ಮತ್ತೆ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ‘ಕಾಂಗ್ರೆಸ್ ಶಾಸಕರಿಂದ ದಲಿತ ಯುವಕನ ಸಾವಿನ ಕೇಸ್ ಮುಚ್ಚಿ ಹಾಕುವ ಯತ್ನ’