ಬೆಂಗಳೂರು: ‘ಗಂಧದ ಗುಡಿ’ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತೆರೆಮೇಲೆ ಕಾಣಿಸಿಕೊಳ್ಳಲಿರುವ ಕೊನೆಯ ಸಿನಿಮಾ , ಈ ಸಂದರ್ಭದಲ್ಲಿ ಸರ್ಕಾರಿ ಮಕ್ಕಳು ಸಿನಿಮಾ ವೀಕ್ಷಿಸಲು ಉಚಿತವಾಗಿ ಸುಮಾರು 100 ಟಿಕೆಟ್‌ಗಳನ್ನು ನೀಡಿ ಮಕ್ಕಳಿಗೆ ಉಚಿತವಾಗಿ ವೀಕ್ಷಿಸಲು ನೆರವಾಗಿದ್ದಾರೆ .
ಹೌದು , ಗೋವಿಂದರಾಜನಗರದ ಮಾಜಿ ಎಂಎಲ್‌ಎ ಪ್ರಿಯಾ ಕೃಷ್ಣ ಸರ್ಕಾರಿ ಶಾಲೆ ಮಕ್ಕಳಿಗೆ ಗಂಧದ ಗುಡಿ ಸಿನಿಮಾ ವೀಕ್ಷಿಸಲು ನೆರವಾಗಿದ್ದಾರೆ. ಮಕ್ಕಳಿಗೆ ಅನುಕೂಲವಾಗಲೆಂದು ಸುಮಾರು 100 ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಯುಗ ಎಂಬ ಎಂಜಿಓ ಮೂಲಕ ಈ ವ್ಯವಸ್ಥೆಯನ್ನು ಮಾಡಿದ್ದಾರೆ.


ಬೆಳಗ್ಗಿನ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಾಗಡಿ ರಸ್ತೆಯಲ್ಲಿರುವ ಕಾಮಾಕ್ಷಿಪಾಳ್ಯದ ವಿಕ್ಟರಿ ಸಿನಿಮಾದಲ್ಲಿ 100 ಸರ್ಕಾರಿ ಶಾಲೆಯ ಮಕ್ಕಳು ಗಂಧದ ಗುಡಿ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ. ಅಪ್ಪು ಕೊನೆಯ ಸಿನಿಮಾ ‘ಗಂಧದ ಗುಡಿ’ ಕೇವಲ ಸಿನಿಮಾ ಅಷ್ಟೇ ಅಲ್ಲ. ಮಕ್ಕಳಿಗೆ ಅದೊಂದು ಶಿಕ್ಷಣಿಕ ಪ್ರವಾಸವೂ ಕೂಡ ಹೌದು. ಕರ್ನಾಟಕ ರಮಣೀಯ ಪ್ರದೇಶಗಳು, ವನ್ಯಜೀವಿಗಳು, ಸಸ್ಯರಾಶಿಗಳನ್ನು ಈ ಸಿನಿಮಾ ಮೂಲಕ ತಿಳಿಸಲಾಗಿದೆ.