ದಾವಣಗೆರೆ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಜಿಲ್ಲೆಯ ಜಗಳೂರು ಬಿಜೆಪಿ ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಹಾಗೂ ಅವರ ಮೂರು ಜನ ಮಕ್ಕಳನ್ನೂ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಉಚ್ಚಾಟನೆ ಮಾಡಲಾಗಿದೆ. ಪಕ್ಷದ ಅಭ್ಯರ್ಥಿ ಎಸ್ ವಿ ರಾಮಚಂದ್ರ ಸೋಲಿಗೆ ಕಾರಣರಾದ ಹಿನ್ನೆಲೆ ಮಾಜಿ ಶಾಸಕ ಗುರು ಸಿದ್ದನಗೌಡ ಅವರ ಸುಪುತ್ರ ಡಾ.ಟಿ.ಜಿ. ರವಿಕುಮಾರ್ ಅದರೆ ಅವರು ಸೇರಿ ಟಿಜಿ ಅರವಿಂದಕುಮಾರ, ಟಿಜಿ ಪವನಕುಮಾರ ಉಚ್ಚಾಟಿಸಲಾಗಿದೆ. ಬಿಜೆಪಿ ರಾಜ್ಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೂಚನೆ ಮೇರೆಗೆ ಬರುವ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.


ಇದನ್ನೂ ಓದಿ : ಮಾಜಿ ಸಂಸದೆ ಹಾಗು ನಟಿ ರಮ್ಯಾ ನಿಧನ ಸುದ್ದಿ ಸುಳ್ಳು..!
ಲೋಕ ಸಭೆ ಟಿಕೆಟ್ ಆಕಾಂಕ್ಷಿಗೆ ಶಾಕ್..!
ದಾವಣಗೆರೆ ಲೋಕ ಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಶಾಸಕ ಗುರು ಸಿದ್ದನಗೌಡ ಅವರ ಸುಪುತ್ರ ಡಾ.ಟಿ.ಜಿ. ರವಿಕುಮಾರ್, ಈ ಬೆನ್ನಲ್ಲೇ ಉಚ್ಛಟನೆ ಮಾಡಿರುವುದು ಶಾಕ್ ನೀಡಿದಂತಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.