Friday, September 29, 2023
spot_img
- Advertisement -spot_img

ಪ್ರಧಾನಿ ಮೋದಿ ಜನ್ಮದಿನ : ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಗಣ್ಯರ ಶುಭಾಶಯಗಳ ಮಹಾಪೂರ

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 73ನೇ ಜನ್ಮದಿನದ ಪ್ರಯುಕ್ತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.

ಸರ್ವಶಕ್ತ ಭಗವಂತ ನಿಮಗೆ ದೇಶ ಸೇವೆ ಮಾಡಲು ಉತ್ತಮ ಆರೋಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ದೇವೇಗೌಡ ಶುಭಾಶಯಗಳನ್ನು ತಿಳಿಸಿದ್ದಾರೆ.

ನಿಮ್ಮ ದೃಷ್ಟಿ, ಸಮರ್ಪಣೆ ಮತ್ತು ನಾಯಕತ್ವವು ರಾಷ್ಟ್ರ ಮತ್ತು ಜಗತ್ತನ್ನು ಪ್ರೇರೇಪಿಸುತ್ತದೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಮತ್ತು ರಾಷ್ಟ್ರ ಮತ್ತು ಪ್ರಪಂಚದ ಸೇವೆಯಲ್ಲಿ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಮ್ಮ ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಯಡಿಯೂರಪ್ಪ ಮೋದಿಯವರಿಗೆ ಶುಭಾಶಯಗಳನ್ನು ಕೋರಿದ್ಧಾರೆ.

ಇದನ್ನೂ ಓದಿ : ಬಿಜೆಪಿ ನಾಯಕರ ರಾಜ್ಯ ಪ್ರವಾಸಕ್ಕೆ ಇಂದು ಚಾಲನೆ

ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯದ ಜೊತೆಗೆ ದೇಶ ಸೇವೆ ಸಲ್ಲಿಸಲು ದೀರ್ಘಾಯುಷ್ಯವನ್ನು ದಯಪಾಲಿಸಲಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಶುಭ ಹಾರೈಸಿದ್ದಾರೆ.

ಈ ದೇಶಕ್ಕೆ ದೇವರಹಾಗೆ ಬಂದು ಒದಗಿರುವ ಒಬ್ಬ ಧೀಮಂತ ನಾಯಕ ಶ್ರೀ ಮೋದಿ ಎಂದು ಹೇಳಿದರೂ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ. ಅವರು ಪ್ರಧಾನಿಯಾದ ನಂತರದ ಈ ಒಂಬತ್ತು ವರ್ಷಗಳಲ್ಲಿ ನಮ್ಮ ದೇಶ ಹೇಗೆ ಮತ್ತೆ, ತನ್ನ ಗತವೈಭವವನ್ನ ಮರಳಿ ಪಡೆದುಕೊಳ್ಳುತ್ತಿದೆ. ಹೇಗೆ ಇವತ್ತು ಇಡೀ ಜಗತ್ತಿಗೇ ನಾಯಕತ್ವ ವಹಿಸಿಕೊಳ್ಳುವಂಥ ಎತ್ತರಕ್ಕೆ ಏರಿದೆ ಅನ್ನುವುದು ನಮ್ಮೆಲ್ಲರ ಕಣ್ಣೆದುರಿಗೇ ಕಾಣುವ ಸತ್ಯ. ಎಲ್ಲ ರಂಗಗಳಲ್ಲೂ ಇಂದು ವಿಶ್ವಗುರುವಾಗುವ ಮಟ್ಟಕ್ಕೆ ಭಾರತ ಬೆಳೆದಿದೆ. ಅವರು ಅನಂತಕಾಲ ಆರೋಗ್ಯವಾಗಿ, ಚೈತನ್ಯ ಶೀಲರಾಗಿ ಇರಲಿ ಅನ್ನುವುದು ಆ ದೇವರಲ್ಲಿ ನನ್ನ ಹೃದಯಾಂತರಾಳದಿಂದ ಪ್ರಾರ್ಥಿಸುತ್ತೇನೆ ಎಂದು ಶಿವಮೊಗ್ಗ ಬಿ.ವೈ. ರಾಘವೇಂದ್ರ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನಂಬಲಾಗದ ನಾಯಕತ್ವವು ಅಸಂಖ್ಯಾತ ಹೃದಯಗಳನ್ನು ಮತ್ತು ಜನರ ಜೀವನವನ್ನು ಮುಟ್ಟುತ್ತದೆ, ಬದಲಾವಣೆಯ ಸ್ವರಮೇಳವನ್ನು ಆಯೋಜಿಸುತ್ತದೆ. ಮತ್ತು ಸಮೃದ್ಧಿಯ ಬೀಜಗಳನ್ನು ಬಿತ್ತುತ್ತದೆ. ಉಡುಪಿ ಕೃಷ್ಣ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಂತೋಷವನ್ನು ದಯಪಾಲಿಸಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಭ ಹಾರೈಸಿ ಟ್ವಿಟ್ ಮಾಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನದಂದು ನನ್ನ ಶುಭಾಶಯಗಳು. ಅವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಆಶೀರ್ವದಿಸಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭಾಶಯಗಳನ್ನು ಕೋರಿದ್ದಾರೆ

ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ಅವರಿಗೆ ಜನ್ಮದಿನದ ಶುಭಾಶಯಗಳು. ಭಾರತದ ಜನರಿಗೆ ಸೇವೆ ಸಲ್ಲಿಸಲು ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.
2014ರಿಂದ ಸತತ ಎರಡು ಬಾರಿ ಪ್ರಧಾನಿಗಳಾಗಿ ಅಧಿಕಾರದ ಚುಕ್ಕಾಣಿ ಅನುಭವಿಸಿರುವ ಮೋದಿಯವರು ದೇಶದ ವಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ದೊಂದಿಗೆ ಹೋರಾಟ ಮುಂದುವರೆಸಿ, ಮೂರನೇ ಬಾರಿಗೆ ಪ್ರಧಾನಿ ಗದ್ದುಗೆ ಅಲಂಕರಿಸಲು ಶತ ಪ್ರಯತ್ನ ನಡೆಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರಭಾವಶಾಲಿಯಾಗಿ ಮಾಡಲು ಪ್ರಯತ್ನಿಸಿರುವ ಅವರಿಗೆ ವಿದೇಶಿ ಗಣ್ಯರು ಹಾಗೂ ಪಕ್ಷಾತೀತವಾಗಿ ಎಲ್ಲ ನಾಯಕರು, ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles