ಹಾಸನ: ‘ಸಂಸದ ಸ್ಥಾನದಿಂದ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಅನರ್ಹತೆ ಕುರಿತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಾತನಾಡಿದ್ದು, ತೀರ್ಪನ್ನು ಓದಿದ ಬಳಿಕವಷ್ಟೇ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ‘ ಎಂದರು.
ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಕೋರ್ಟ್ ತೀರ್ಪಿನ ಪ್ರತಿ ನನಗೆ ಇನ್ನೂ ಸಿಕ್ಕಿಲ್ಲ. ಅದರ ಬಗ್ಗೆ ಕಮೆಂಟ್ ಮಾಡಲು ಹೋಗುವುದಿಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ. ಪೂರ್ತಿ ಆದೇಶ ಓದದೇ ಮಾಜಿ ಪ್ರಧಾನಿಯಾಗಿ ಪ್ರತಿಕ್ರಿಯೆ ನೀಡುವುದು ಯೋಗ್ಯವಲ್ಲ, ಸಮಂಜಸವೂ ಅಲ್ಲ ಎಂದರು.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸ್ವಾಭಾವಿಕವಾಗಿ ನಡೆಯುತ್ತದೆ. ನಾನು ಇಲ್ಲಿ ಪೂಜೆ ಮಾಡಲೆಂದು ಬಂದಿದ್ದೇನೆ. ಪ್ರಜ್ವಲ್ ಕೂಡ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ಹೋಗಿದ್ದಾರೆ ಎಂದರು.
ಇದನ್ನೂ ಓದಿ: Prajwal Revanna Disqualified: ಮೇಲ್ಮನವಿ ಬಗ್ಗೆ ಪ್ರಜ್ವಲ್ ನಿರ್ಧರಿಸ್ತಾರೆ: ಹೆಚ್.ಡಿ.ರೇವಣ್ಣ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ. ಅವರಿಗೆ ಕನಿಷ್ಠ ನಾಲ್ಕೈದು ದಿನ ವಿಶ್ರಾಂತಿ ಪಡೆಯುವಂತೆ ನಾನು ಸಲಹೆ ನೀಡಿದ್ದೇನೆ ಎಂದರು.
ನನಗೆ 93 ವರ್ಷ ತುಂಬಿದ್ದು, ಪಕ್ಷದ ಕೆಲಸಕ್ಕಾಗಿ ಶಕ್ತಿ ಇರುವಷ್ಟು ಹೋರಾಟ ಮಾಡುತ್ತೇನೆ. ಇಂದು ಮತ್ತು ನಾಳೆ ಇಲ್ಲಿಯೇ ಇರುತ್ತೇನೆ. ಬಳಿಕ ಬೆಂಗಳೂರಿಗೆ ಹೋಗಿ ಮತ್ತೆ ಮುಂದಿನ ವಾರ ಬರುತ್ತೇನೆ ಎಂದು ದೇವೇಗೌಡರು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.