ಮೈಸೂರು : ಪಾರ್ಲಿಮೆಂಟ್ ಚುನಾವಣೆಗೋಸ್ಕರ ಮೈಸೂರಿಗೆ ಭೇಟಿ ನೀಡಿದ್ದೇನೆ, ನಮ್ಮ ಕೋರ್ ಕಮಿಟಿಯ ಎಲ್ಲಾ ಸದಸ್ಯರು ಎಲ್ಲಾ ಕಡೆ ಭೇಟಿ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ-ಜೆ.ಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಒಳ್ಳೆಯ ಸೌಹಾರ್ದಯುತ ಸಭೆ ಮಾಡಿದ್ದೇವೆ, ಅಭಿಪ್ರಾಯ ಸಂಗ್ರಹಿಸಿದ್ದೇವೆ, ಕೇಂದ್ರದ ಬಿಜೆಪಿ ನಾಯಕರು ದೇವೇಗೌಡರು ಕುಮಾರಸ್ವಾಮಿ ಅವರ ಜೊತೆ ಮಾತನಾಡಿರುವುದು ನಿಜ,ಇನ್ನು ಮೈತ್ರಿ ವಿಚಾರ ಫೈನಲ್ ಆಗಿಲ್ಲ, ಆಗಲೇ ಕಾಂಗ್ರೆಸ್ ನವರು ದೆವ್ವ ಬಂದವರ ರೀತಿ ಆಡುತ್ತಿದ್ದಾರೆ, ನಮ್ಮ ಹೊಂದಾಣಿಕೆಯಾದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರ ನಾಯಕರು ಸೀಟ್ ಹಂಚಿಕೆ ವಿಚಾರ ತೀರ್ಮಾನ ಮಾಡುತ್ತಾರೆ, ಎಲ್ಲಾ ಮೀಟಿಂಗ್ ನಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ, ಮೈತ್ರಿ ಆದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ದೇವೇಗೌಡರೇ ಹೇಳಿಕೆ ನೀಡಿದ್ದಾರೆ, ಈಗಾಗಲೇ ಸಿದ್ದರಾಮಯ್ಯ,ಡಿಕೆ ಶಿವಕುಮಾರ್,ಸಚಿವರು ರಿಯಾಕ್ಟ್ ಮಾಡಿದ್ದಾರೆ, ಇನ್ನೂ ಮೈತ್ರಿ ಹೊಂದಾಣಿಕೆ ಫೈನಲ್ ಆಗಿಲ್ಲ, ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ತೀರ್ಮಾನ ಮಾಡುತ್ತಾರೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ವಪಕ್ಷ ಸಭೆಯಲ್ಲಿ ನೀರು ಬಿಡುವುದಿಲ್ಲ ಅಂತ ಹೇಳಿದ್ರು, ಆದ್ರೆ ನೀರು ಬಿಟ್ಟಿದ್ದಾರೆ, ಇವರು ಕೊಟ್ಟ ಮಾತಿನಂತೆ ನಡೆಯಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನೀರು ಬಿಡುವ ಸಂದರ್ಭದಲ್ಲೂ ಸರ್ವಪಕ್ಷದ ಸದಸ್ಯರಿಗೆ ಹೇಳಬೇಕಿತ್ತು, ಅಲ್ಲಿ ಒಂದು ತೊಟ್ಟು ನೀರು ಬಿಡಲ್ಲ ಅಂತ ಹೇಳಿ ಎಲ್ಲ ನೀರನ್ನು ಬಿಟ್ಟು ಬಿಟ್ಟಿದ್ದಾರೆ, ರಾಜ್ಯದ ಜನಕ್ಕೆ ಮೋಸ ಮಾಡಿದ್ದಾರೆ, ಮೇಕೆದಾಟು ಯೋಜನೆ ತರುತ್ತೇವೆ ಅಂತ ಹೇಳಿದ್ರು, ಆದ್ರೀಗ ಒಂದು ಮಾತು ಆಡುತ್ತಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ನೆದರ್ ಲ್ಯಾಂಡ್ ಪ್ರಧಾನಿ ಸ್ವಾಗತಿಸಿದ ಡಿಕೆ ಶಿವಕುಮಾರ್
ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನತೆಗೆ ಮೋಸ ಮಾಡಿ ತಮಿಳುನಾಡಿಗೆ ಬಿಟ್ಟಿದ್ದಾರೆ. ಮೇಕೆದಾಟು ಯೋಜನೆಯನ್ನ ನಾವು ತಂದೆ ತರ್ತೀವಿ ಅಂದ್ರು, ಈಗ ಮೇಕೆದಾಟು ಬಗ್ಗೆ ಮಾತನಾಡ್ತಿಲ್ಲ, ನನ್ನನ್ನಾಗಲಿ, ಬೊಮ್ಮಾಯಿ,ಯಡಿಯೂರಪ್ಪರನ್ನಾಗಲಿ ಕರೆದಿಲ್ಲ, ಇವರ ಯೋಗ್ಯತೆಗೆ ಪಾರ್ಲಿಮೆಂಟ್ ನಲ್ಲಿ ಗೆದ್ದಿದ್ದು ಒಂದು ಸ್ಥಾನವಷ್ಟೇ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.