ಹಾಸನ : ಬಿಜೆಪಿ ಜೊತೆ ಅಥವಾ ಇನ್ನೊಬ್ಬರ ಜೊತೆ ಮೈತ್ರಿ ಮಾಡ್ಕೋತ್ತಿವಿ ಇವರಿಗೇನು ಕಾಯಿಲೆ? ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಿಡಿಕಾರಿದ್ದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಹೋದರೆ ಇವರಿಗೇನು ತೊಂದರೆ ? ಹೆಚ್ ಡಿ ದೇವೇ ಗೌಡರು, ಕುಮಾರಸ್ವಾಮಿ ಬಿಜೆಪಿ ಒಂದಾದರೆ ಏಕೆ ನೀವ್ಯಾಕೆ ಹೆದರಬೇಕು ? ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು ಐದು ಗ್ಯಾರೆಂಟಿ ಕೊಟ್ಟಿದ್ದೇವೆ ಎಂದು ಧೈರ್ಯವಾಗಿ ಹೇಳಲಿ, ಒಂದು ಕಡೆ ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ, ಇನ್ನೊಂದು ಕಡೆ ಕೋಮುವಾದಿ ದೂರ ಇಡುವ ಪ್ರಾದೇಶಿಕ ಪಕ್ಷ ಮುಗಿಸಲು ಹೊರಟಿದ್ದಾರೆ, 2018 ರಲ್ಲಿ ಬಿ ಟೀಂ ಮನೆ ಹತ್ತಿರ ಏಕೆ ಬಂದ್ರಿ ನೀವು? ಎಂದು ಹರಿಹಾಯ್ದರು.
ಇದನ್ನೂ ಓದಿ : ಗೃಹ ಸಚಿವರೇ ನೀವೂ ದಲಿತ ಸಮುದಾಯ; ದಬ್ಬಾಳಿಕೆ ಮಾಡುವ ಮಂತ್ರಿಗೆ ಏನು ಮಾಡ್ತೀರ?
ನಾವು ಎ ಟೀಂ ಜೊತೆನಾದ್ರು ಹೋಗ್ತಿವಿ, ಬಿ ಟೀಂ ಜೊತೆನಾದ್ರು ಹೋಗ್ತಿವಿ ಇವರಿಗೇನು ತೊಂದರೆ?ಯಾವ ಟೀಂ ಜೊತೆ ಹೋದರೂ ಅಲ್ಪಸಂಖ್ಯಾತರನ್ನು ಕೈಬಿಡಲ್ಲ, ಎಲ್ಲರ ಜೊತೆ ಸೇರಿಕೊಂಡು ಈ ರಾಜ್ಯ ಉಳಿಸಬೇಕು, ಮುಸ್ಲಿಂರಿಗೆ ಮೀಸಲು ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ದೇವೇಗೌಡರನ್ನು ಪ್ರಧಾನಮಂತ್ರಿಯಿಂದ ಕೆಳಗಿಳಿಸಿದ್ರು, ದೇವೇಗೌಡರನ್ನು ಹೇಗೆ ನಡೆಸಿಕೊಂಡಿದ್ದಾರೆ ನನಗೆ ಗೊತ್ತಿದೆ, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಹತ್ರ ಹೋದರೆ ಹೆಚ್.ಡಿ.ದೇವೇಗೌಡರಿಗೆ ಗೌರವ ಕೊಡ್ತಾರೆ, 2028 ಕ್ಕೆ ಜೆಡಿಎಸ್ ಉಳಿಯುತ್ತೋ, ಇಲ್ಲವೋ ನೋಡೋಣ, ಈ ಬೆಳವಣಿಗೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ : ದೇಶದ ಅತೀ ಶ್ರೀಮಂತ ರಾಜಕೀಯ ಪಕ್ಷ ಯಾವುದು ಗೊತ್ತಾ?
ಕಾಂಗ್ರೆಸ್‌ಗೆ ಅಧಿಕಾರದ ಮದ ಏರಿದೆ, ಕಾಂಗ್ರೆಸ್ ಏಕೆ ಈ ಸ್ಥಿತಿಗೆ ಬಂತು ? ಸಿಪಿಎಂ ಮುಗ್ಸಿದ್ರು, ಅವರು ಇಲ್ಲಾ ಅಂದಿದ್ರೆ ಮನ್‌ಮೋಹನ್ ಸಿಂಗ್ ಪ್ರಧಾನಮಂತ್ರಿ ಆಗ್ತಿದ್ರಾ? ಬೇಕಾದಾಗ ತಬ್ಬಿಕೊಳ್ತಾರೆ, ಬೇಡವಾದಾಗ ಮುಗಿಸ್ತಾರೆ, ಲಾಲು ಪ್ರಸಾದ್ ಯಾದವ್ ಮುಗಿಸಿದ್ರು, ಅದಕ್ಕೆ ಕಾಂಗ್ರೆಸ್‌ಗೆ ಈ ದುಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಹಾಸನ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬರಗಾಲವಿದೆ, ಸರ್ಕಾರ ಬಂದು ನಾಲ್ಕು ತಿಂಗಳಾಗಿದೆ, ಮಳೆ ಕೊರತೆಯಿಂದ ರೈತರು ಸಂಪೂರ್ಣ ಕಷ್ಟಕ್ಕೆ ಸಿಕ್ಕಿದ್ದಾರೆ, ಏಳು ವಿಧಾನಸಭಾ ಕ್ಷೇತ್ರಗಳನ್ನು ಬರಗಾಲ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ 1,18,792 ಹೆಕ್ಟೇರ್ ತೆಂಗಿನಮರಗಳಿವೆ , ಶೇ.60 ರಷ್ಟು ತೆಂಗಿನಮರಗಳಿಗೆ ರೋಗ ತಗುಲಿದೆ, ಐದು ಗ್ಯಾರೆಂಟಿ ಕೊಡಲು ಹೋಗಿ ರೈತರ ಜೊತೆ ಚೆಲ್ಲಾಟ ಆಡಬೇಡಿ, ರೈತರು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇಲಾಖೆಯಿಂದ ಮಾಹಿತಿ ಪಡೆದು ಹೇಳುತ್ತಿದ್ದೇನೆ, ಇಲ್ಲಿ ರಾಜಕೀಯ ಭಾಷಣ ಮಾಡುತ್ತಿಲ್ಲ, ಈ ವರ್ಷ ಗ್ಯಾರೆಂಟಿ ಕೊಡಲು ಹಣವಿಲ್ಲ ಎಂದು ಹೇಳಬೇಕಿತ್ತು, ಕೂಡಲೇ ಸರ್ಕಾರ ರೈತರ ಕಡೆ ಗಮನಕೊಡಲಿ, ನಿಮ್ಮ ಗ್ಯಾರೆಂಟಿಗಾಗಿ ರೈತರ ಮನೆ ಹಾಳುಮಾಡಬೇಡಿ, ಅವರ ಕುಟುಂಬ ಬೀದಿಪಾಲು ಮಾಡಬೇಡಿ ಎಂದು ಆಕ್ರೋಶಿಸಿದರು.
ಇದನ್ನೂ ಓದಿ : ಬಿಜೆಪಿಯಲ್ಲಿ ಹೆಣ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ : ಸಿಎಂಗೆ ರಾಘವೇಂದ್ರ ಟಾಂಗ್
ತಮಿಳುನಾಡಿಗೆ 20 ಟಿಎಂಸಿ ನೀರು ಬಿಟ್ಟರು, ಹೇಮಾವತಿ ನದಿಯಿಂದ ತುಮಕೂರಿಗೆ ಎರಡು ತಿಂಗಳಿನಿಂದ ನೀರು ಬಿಟ್ಟಿದ್ದಾರೆ, ಜೆಡಿಎಸ್‌ಗೆ ಓಟು ಹಾಕಿದ್ದಾರೆ ಅಂತ ನಮಗೆ ನೀರೇ ಬಿಟ್ಟಿಲ್ಲ, ನಮಗೆ ಗ್ಯಾರೆಂಟಿ ಕೊಟ್ಟಿದ್ದೀರಿ, ದನಕರುಗಳಿಗೆ ಯಾವ ಗ್ಯಾರೆಂಟಿ ಕೊಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಲು ಬಿಡಲ್ಲ ನಾವು ಅವರ ಜೊತೆ ಇದ್ದೇ ಇರ್ತೆನೆ, ಇದು ನನ್ನ ಧರ್ಮ ಅದನ್ನು ಪರದೆ ಮೇಲೆ ನೋಡಿ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.