Monday, December 11, 2023
spot_img
- Advertisement -spot_img

ವಾಕ್ ಸ್ವಾತಂತ್ರ್ಯವು ದ್ವೇಷ ಭಾಷಣವಾಗಿ ಬದಲಾಗಬಾರದು; ಮದ್ರಾಸ್ ಹೈಕೋರ್ಟ್

ಚೆನ್ನೈ: ಸನಾತನ ಧರ್ಮದ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸನಾತನ ಧರ್ಮವು ರಾಷ್ಟ್ರಕ್ಕೆ, ರಾಜನಿಗೆ, ತಂದೆ-ತಾಯಿಗೆ, ಗುರುಗಳಿಗೆ ಮತ್ತು ಬಡವರ ಬಗ್ಗೆ ಕಾಳಜಿ ವಹಿಸುವುದು ಸೇರಿದಂತೆ ಹಲವು ಕರ್ತವ್ಯಗಳ ಒಂದು ಗುಂಪಾಗಿದೆ ಎಂದು ನ್ಯಾಯಾಲಯವು ಹೇಳಿದೆ.

‘ಸನಾತನ ವಿರೋಧ’ ವಿಷಯದ ಕುರಿತು ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಸ್ಥಳೀಯ ಸರ್ಕಾರಿ ಕಲಾ ಕಾಲೇಜು ಹೊರಡಿಸಿದ ಸುತ್ತೋಲೆಯನ್ನು ಪ್ರಶ್ನಿಸಿ ಇಳಂಗೋವನ್ ಎಂಬುವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಶೇಷಸಾಯಿ ಈ ಅಭಿಪ್ರಾಯಪಟ್ಟರು.ಅಲ್ಲದೆ ಸನಾತನ ಧರ್ಮ ಹಾಗೂ ಜಾತೀಯತೆ, ಕೋಮು ಎಂಬ ವಿಚಾರಗಳು ಕೆಲವೊಮ್ಮೆ ಗದ್ದಲಕ್ಕೆ ಕಾರಣವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ‘ಕಾಂಗ್ರೆಸ್‌ನವರು ರಾಜ್ಯದ ರೈತರ ಹಿತ ಬಲಿ ಕೊಡುತ್ತಿದ್ದಾರೆ’

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷ ಭಾಷಣವಾಗಿ ಬದಲಾಗಬಾರದು ಎಂದು ನ್ಯಾಯಾಧೀಶರು ಒತ್ತಿ ಹೇಳಿದರು, ವಿಶೇಷವಾಗಿ ಅದು ಧರ್ಮದ ವಿಷಯಗಳಿಗೆ ಸಂಬಂಧಿಸಿದಂತೆ ಅವರ ಭಾಷಣಗಳು ಎಂದಿಗೂ ಬೇರೆಯವರಿಗೆ ನೋವಾಗುವಂತಿರಬಾರದು ಎಂದಿದ್ದಾರೆ.

‘ಪ್ರತಿಯೊಂದು ಧರ್ಮವು ನಂಬಿಕೆಯ ಮೇಲೆ ಸ್ಥಾಪಿತವಾಗಿದೆ. ಆದ್ದರಿಂದ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ಮನದಲ್ಲಿಟ್ಟುಕೊಂಡಾಗ, ಮತ್ತೊಬ್ಬರಿಗೆ ನೋವಾಗದಂತೆ ಎಚ್ಚರಿಕೆ ವಹಿಸುವುದು ಅವಶ್ಯಕ’ ಎಂದಿದ್ದಾರೆ.

ಇದನ್ನೂ ಓದಿ: ಇಡೀ ದೇಶದ ಪತ್ರಕರ್ತರಿಗೆ ಮೋದಿ ನಿಷೇಧ ಹೇರಿದ್ದಾರಲ್ಲ?: ಸಿದ್ದರಾಮಯ್ಯ

ಇತ್ತೀಚೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತ ಟೀಕೆ ಸಂಬಂಧ ಕೋರ್ಟ್ ಈ ಅಭಿಪ್ರಾಯಪಟ್ಟಿದೆ. ಸಚಿವರ ಸನಾತನ ಧರ್ಮ ಟೀಕೆಗೆ ಭಾರೀ ವಿರೋಧ ಕೇಳಿಬಂದಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles