Friday, September 29, 2023
spot_img
- Advertisement -spot_img

‘ದೆಹಲಿ ಘೋಷಣೆ’ಗಳ ಪ್ರತಿ ಪದಗಳಿಗೂ ಜಿ20 ದೇಶಗಳು ಸಹಮತಿಸಿವೆ: ಬಿಜೆಪಿ

ಬೆಂಗಳೂರು: ದೆಹಲಿ ಘೋಷಣೆಗಳ ಪ್ರತಿ ಪದಗಳಿಗೂ ಜಿ20 ಗುಂಪಿನ ಎಲ್ಲ ದೇಶಗಳು ಸಹಮತ ನೀಡಿವೆ ಎಂದು ರಾಜ್ಯ ಬಿಜೆಪಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿರುವ ಬಿಜೆಪಿ, ‘ದೆಹಲಿ ಡಿಕ್ಲೆರೇಷನ್ ಅನ್ನು ಜಿ20 ಶೃಂಗಸಭೆಯು ಪೂರ್ಣ ಸಹಮತದೊಂದಿಗೆ ಅಂಗೀಕರಿಸಲು ಕಾರಣವಾದ ಅಧ್ಯಕ್ಷ ದೇಶ ಭಾರತ ಹೊಸ ಚರಿತ್ರೆಯನ್ನು ಸೃಷ್ಟಿಸಿದೆ. ಅಧ್ಯಕ್ಷ ದೇಶ ಭಾರತದ ನೇತೃತ್ವದಲ್ಲಿ 73 ದೆಹಲಿ ಘೋಷಣೆಗಳನ್ನು ಮಾಡಲಾಯಿತು. 200 ಗಂಟೆಗಳ ಕಾಲ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಪರಿಶ್ರಮ ಇದರಲ್ಲಿ ಅಡಗಿದೆ. 300 ದ್ವಿಪಕ್ಷೀಯ ಮಾತುಕತೆಗಳು, 15 ಕರಡುಗಳ ಪ್ರಸ್ತಾಪ ಮಾಡಲಾಯಿತು’ ಎಂದು ಹೇಳಿದೆ.

ಇದನ್ನೂ ಓದಿ; ಇಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸಭೆ

‘ಇದು ಯುದ್ಧದ ಸಮಯವಲ್ಲ, ಶಾಂತಿಯುತ ಮಾರ್ಗಗಳ ಮೂಲಕ ಪರಿಹಾರ ಕಾರ್ಯಕೈಗೊಳ್ಳಬೇಕು ಎಂಬ ಭಾರತದ ನಿಲುವಿಗೆ ರಷ್ಯಾ- ಚೀನಾ ಒಪ್ಪಿ ಸಹಿ ಮಾಡಿವೆ. ಭಾರತದ ಘೋಷಣೆಗಳ ಪ್ರತಿ ಪದಗಳಿಗೂ ಎಲ್ಲ ದೇಶಗಳು ಸಹಮತ ನೀಡಿವೆ. ಆದರೆ ಅಷ್ಟೂ ಸುಲಭವಾಗಿರಲಿಲ್ಲ’ ಎಂದಿದೆ.

‘ಅಮೆರಿಕ ಮತ್ತು ರಷ್ಯಾ-ಚೀನಾ ಯುದ್ಧದ ಪ್ರತಿಕೂಲ ಸಂದರ್ಭದಲ್ಲಿಯೂ ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಭಾರತದ ವರ್ಚಸ್ಸನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸಿದೆ. ಕ್ಲಿಷ್ಟಕರ ಸಮಸ್ಯೆಯ ನಡುವೆ ಭಾರತ ಇಂಥದೊಂದು ಸಾಧನೆ ಮಾಡಿ ವಿಶ್ವದ ಎದುರು ಗೆದ್ದು ತೋರಿಸಿದೆ’ ಎಂದು ಬಿಜೆಪಿ ಸಂತಸ ವ್ಯಕ್ತಪಡಿಸಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles