ನವದೆಹಲಿ: ನಗರದಲ್ಲಿ ನಡೆದ 2 ದಿನಗಳ ಜಿ-20 ಶೃಂಗಸಭೆ ಮುಕ್ತಾಯಗೊಂಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್‌ಗೆ ವಾಪಸ್ ತೆರಳಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ, ಐತಿಹಾಸಿಕ ಜಿ-20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು ಪ್ರಧಾನಿ ಮೋದಿ, ಆತ್ಮೀಯ ಸ್ವಾಗತ ಕೋರಿದ ಭಾರತೀಯರಿಗೆ ಧನ್ಯವಾದಗಳು ಎಂದು ಸುನಕ್ ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಈ ಎರಡು ದಿನಗಳ ಶೃಂಗಸಭೆಯಲ್ಲಿ ವಿಶ್ವ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ “ನಿರ್ಣಾಯಕ ನಾಯಕತ್ವ” ಮತ್ತು ಜಾಗತಿಕ ಧ್ವನಿಯನ್ನು ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶ್ವ ನಾಯಕರು ಭಾರತದ ಆತಿಥ್ಯವನ್ನು ಶ್ಲಾಘಿಸಿದರು ಮತ್ತು ಯಶಸ್ವಿ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದಕ್ಕಾಗಿ ಪ್ರಧಾನಿ ಮೋದಿಯ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ದೇಶದ ಸಂದೇಶವು ಎಲ್ಲಾ ಪ್ರತಿನಿಧಿಗಳ ಧ್ವನಿಗೂಡಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ತೆಲಂಗಾಣದಲ್ಲೂ ಕಾಂಗ್ರೆಸ್‌ನಿಂದ 5 ಗ್ಯಾರಂಟಿ ಘೋಷಣೆ!
ಶೃಂಗಸಭೆಯಲ್ಲಿ ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಜಿ 20 ಗೆ “ಶ್ರೇಷ್ಠ ನಾಯಕತ್ವ” ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದಾರೆ. ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಪ್ರಧಾನಿ ಮೋದಿಯವರ ಆತಿಥ್ಯಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ಆಶಯದಂತೆ ನವೆಂಬರ್‌ನಲ್ಲಿ ವರ್ಚುವಲ್ ಶೃಂಗಸಭೆಯ ಪ್ರಸ್ತಾವವನ್ನು ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.