ನವದೆಹಲಿ : ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ G20 ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಜಾಗತಿಕ ದಿಗ್ಗಜರೆಲ್ಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಗತಿಕ ಮಟ್ಟದಲ್ಲಿ ತನ್ನದೇಯಾದ ಸ್ಥಾನಮಾನ ಗಳಿಸಿಕೊಂಡಿರುವ ಭಾರತವು ಇದೀಗ ಚೊಚ್ಚಲ ಜಾಗತಿಕ ಮಟ್ಟದ ದಿಗ್ಗಜರ ಸಭೆಗೆ ಆತಿಥ್ಯ ವಹಿಸಿಕೊಂಡಿದೆ, ಸಭೆ ನಡೆಯಲಿರುವ ನವದೆಹಲಿಯು ಸಂಪೂರ್ಣವಾಗಿ ಭದ್ರತಾ ಕೋಟೆಯಾಗಿದೆ.
ಇದನ್ನೂ ಓದಿ : BREAKING NEWS-ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್!
ಇಂದಿನ ಆರಂಭದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಪ್ರಮುಖ 20 ದೇಶಗಳ ಪ್ರಧಾನ ಮಂತ್ರಿಗಳು ಹಾಗೂ ಅಧ್ಯಕ್ಷರೊಂದಿಗೆ ಮಹತ್ವದ ಮಾತುಕತೆ ನಡೆಸಿ, ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಎರಡು ದಿನಗಳ ಕಾಲದ ಬೆಲೆ ಏರಿಕೆ, ಶಿಕ್ಷಣ, ಲಿಂಗ ಸಮಾನತೆ, ಮಹಿಳಾ ಸಮಾನತೆ, ಭಯೋತ್ಪಾದನೆ ಮುಕ್ತ ಕನಸು, ವಿಜ್ಞಾನ ತಂತ್ರಜ್ಞಾನಗಳ ಪಾಲುದಾರಿಕೆ, ವಿಶ್ವ ಆರ್ಥಿಕತೆಯ ಸಬಲೀಕರಣ, ‘ಯದ್ಧ’ ಮುಕ್ತ ವಿಶ್ವ ನಿರ್ಮಾಣ, ಪರಿಸರ ರಕ್ಷಣೆ-ಹಸಿರು ವಲಯ ಸ್ಥಾಪನೆ, ಬೆಲೆ ಏರಿಕೆ ಹಾಗೂ ಬಡತನ ನಿರ್ಮೂಲನೆಗೆ ಪಣ, ಶಿಕ್ಷಣ ಹಾಗೂ ಸಂಸ್ಕ್ರತಿಯ ಮಹಾ ವಿನಿಮಯ ಸೇರಿದಂತೆ ಹಲವು ಪ್ರಮುಖ ಚರ್ಚೆಗಳು ನಡೆಯಲಿವೆ.
G20 ಶೃಂಗಕ್ಕೆ ಯಾರೆಲ್ಲ ನಾಯಕರು ಆಗಮಿಸಿದ್ದಾರೆ?
ಜಪಾನ್ ಪ್ರಧಾನಿ- ಪುಮಿಯೋ ಕಿಶಿದಾ
ಬ್ರಿಟನ್ ಪ್ರಧಾನಿ-ರಿಷಿ ಸುನಕ್
ಟರ್ಕಿ ಅಧ್ಯಕ್ಷ- ರಿಕ್ಯಾಪ್ ಎಡೋರ್ಗನ್
ಮಾರಿಷಸ್ ಪ್ರಧಾನಿ- ಪವಿಂದ ಕುಮಾರ್ ಜುಗ್ನೌಥ್
ಜರ್ಮನಿ ಚಾನ್ಸೆಲರ್- ಅಲಾಫ್ ಸ್ಕೋಕ್
ದಕ್ಷಿಣ ಆಫ್ರಿಕಾ ಅಧ್ಯಕ್ಷ-ಸಿರಿಲ್ ರಾಂಪೋಸಾ
ಸಿಂಗಾಪೂರ್ ಪ್ರಧಾನಿ- ಲೂಂಗ್ ಲೀ
ಇಟಲಿ ಪ್ರಧಾನಿ- ಜಾರ್ಜಿಯಾ ಮೆಲೋನಿ
ಫ್ರಾನ್ಸ್ ಅಧ್ಯಕ್ಷ- ಎಮ್ಯಾನುವೆಲ್ ಮ್ಯಾಕ್ರಾನ್
ಆಸ್ಟ್ರೇಲಿಯಾ ಪ್ರಧಾನಿ-ಆಂಟೋನಿ ಆಲ್ಬನೀಸ್
ಬಾಂಗ್ಲಾ ಪ್ರಧಾನಿ- ಶೇಖ್ ಹಸೀನಾ
ಯುಎಇ ಅಧ್ಯಕ್ಷ- ಶೇಕ್ ಮೊಹಮ್ಮದ್
ನೆದರ್ಲೆಂಡ್ ಪ್ರಧಾನಿ- ಮಾರ್ಕ್ ರುಟ್ಟೆ
ದಕ್ಷಿಣ ಕೊರಿಯಾ ಅಧ್ಯಕ್ಷ-ಸುಕ್ ಯಿಯೋಲ್ ಯೂನ್
ಈಜಿಪ್ಟ್ ಅಧ್ಯಕ್ಷ-ಅಬ್ದುಲ್ ಫತೇಹ್ ಇಲ್
ಬ್ರೆಜಿಲ್ ಅಧ್ಯಕ್ಷ- ಲಿಯಾಜ್ ಲುಲಿಯಾ
ಕೆನಡಾ ಪ್ರಧಾನಿ-ಜಸ್ಟಿನ್ ತೌದಾ
ಅರ್ಜೆಂಟೀನಾ ಅಧ್ಯಕ್ಷ-ಆಲ್ಬರ್ಟೋ ಫರ್ನಾಂಡಿಸ್
ಇಂಡೋನೇಷ್ಯಾ ಅಧ್ಯಕ್ಷ-ಜೊಕೊ ವಿಡೊಡೊ
ಸ್ಪೇನ್ ಅಧ್ಯಕ್ಷ-ಪೆಡ್ರೋ ಸ್ಯಾಂಜೆಸ್ ಪೆರೆಜ್ ಸೇರಿದಂತೆ ಹಲವರು ಆಗಮಿಸಿದ್ದಾರೆ.
ಜಾಗತಿಕ ನಾಯಕರ ಇಂದಿನ ದಿನಚರಿಯಲ್ಲಿ ಏನೇನಿದೆ..?
ಆಗಮಿಸಿದ ಎಲ್ಲ ಗಣ್ಯರೊಂದಿಗೆ ಪ್ರಧಾನಿ ಮೋದಿ ಸ್ವಾಗತ ಫೋಟೋ ಶೂಟ್ ನಡೆಸಲಿದ್ದಾರೆ. 09.30ರಿಂದ 10.30ರವರೆಗೆ ಭಾರತ ಮಂಟಪದ ಶೃಂಗಸಭೆಯ ಸ್ಥಳದಲ್ಲಿ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮಿಸಲಿದ್ದಾರೆ. ಬಳಿಕ 10.30ರಿಂದ 1.30ರವರೆಗೆ ಶೃಂಗಸಭೆ ಸಭಾಂಗಣದಲ್ಲಿ ಒಂದು ಭೂಮಿ ಕುರಿತು ಸಮಾವೇಶ ನಡೆಯಲಿದೆ.
1.30ರಿಂದ 3.00ರವರೆಗೆ ಭಾರತ ಮಂಟಪದಲ್ಲಿ ದ್ವಿಪಕ್ಷೀಯ ಸಭೆಗಳು ನಡೆಯಲಿದ್ದು, ಮಧ್ಯಾಹ್ನ 3.ರಿಂದ 4.45ರವರೆಗೆ ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪದ ಹಂತ 1ರಲ್ಲಿ ಒಂದು ಕುಟುಂಬ ಕುರಿತು ಎರಡನೇ ಸಮಾವೇಶ ಆಯೋಜಿಸಲಾಗಿದೆ. ನಂತರ ಹೋಟೆಲ್‌ಗಳಿಗೆ ಅಥಿತಿಗಳು ಅವರಿಗೆ ನಿಗದಿಪಡಿಸಿದ ಹೋಟೆಲ್‌ಗಳಿಗೆ ನಿರ್ಗಮಿಸಲಿದ್ದಾರೆ.
ಸಂಜೆ 7.ರಿಂದ 8ರವರೆಗೆ ವಿಶ್ವ ನಾಯಕರು ಹಾಗೂ ನಿಯೋಗದ ಪ್ರಮುಖರು ಭೋಜನ ಕೂಟದಲ್ಲಿ ಭಾಗವಹಿಸಿ ಫೋಟೋ ಶೂಟ್ ನಡೆಸಲಿದ್ದಾರೆ.
ರಾತ್ರಿ 8ರಿಂದ 9.15ರವರೆಗೆ ಊಟದ ಮಧ್ಯೆ ಮಾತುಕತೆ ನಡೆಯಲಿದೆ. ಬಳಿಕ 9ರಿಂದ 10.45ರವರೆಗೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಲೀಡರ್ಸ್ ಲಾಂಜ್, ಭಾರತ ಮಂಟಪದ ಹಂತ2 ರಲ್ಲಿ ಸೇರುತ್ತಾರೆ. ನಂತರ ದಕ್ಷಿಣ ಅಥವಾ ಪಶ್ಚಿಮ ಪ್ಲಾಜಾದಿಂದ ಹೋಟೆಲ್‌ಗಳಿಗೆ ನಿರ್ಗಮಿಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.