ನವದೆಹಲಿ : ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಜಾಗತಿಕ ಮಟ್ಟದ ದಿಗ್ಗಜರು ಇಂದು ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪ್ರತಿಮೆಗೆ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಗಣ್ಯರನ್ನು ಗಾಂಧಿಯವರಿಗೆ ಅತ್ಯಂತ ಪ್ರೀಯವಾಗಿದ್ದ ಖಾದಿ ವಸ್ರ್ತ ನೀಡಿ ಆತ್ಮೀಯವಾಗಿ ರಾಜ್‌ಘಾಟ್‌ಗೆ ಸ್ವಾಗತಿಸಿದ್ದಾರೆ.


ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್, ನೆದರ್ಲ್ಯಾಂಡಿನ ಪ್ರಧಾನಿ ಮಾರ್ಕ್ ರಟ್ಟರ್, ಇಂಡೋನೇಷ್ಯಾ ಪ್ರಧಾನಿ ಜೋಕೋ ವಿಡೋಡೋ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಾಲ್ ರಾಮಪೋಸಾ, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಮಹಾತ್ಮಾ ಗಾಂಧಿಯವರ ಸಮಾಧಿಗೆ ಗೌರವ ನಮನ ಸಲ್ಲಿಸಿದ್ದಾರೆ.


ಮಳೆಯ ನಡುವೆಯೇ ಮಹಾತ್ಮಾ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಲು ವಿಶ್ವನಾಯಕರು ಬೆಳಗ್ಗೆಯೆ ರಾಜ್‌ಘಾಟ್‌ಗೆ ಆಗಮಿಸಿ ರಾಷ್ಟ್ರಪಿತನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.








ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.