ಬೆಂಗಳೂರು: ಯಾರು ಏನೇ ಹೇಳಲಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಜ್ರ ಇದ್ದಂತೆ ಎಂದು ಕೆ ಆರ್ ಪಿ ಪಕ್ಷದ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ , ಪತ್ನಿ ಗಾಲಿ ಲಕ್ಷ್ಮೀ ಅರುಣಾ ಹೇಳಿದರು.
ಬಳ್ಳಾರಿಯಲ್ಲಿ ಕೆಆರ್ ಪಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿ, ಜನಾರ್ದನ ರೆಡ್ಡಿ ಯಾರನ್ನು ಬೆಳೆಸಿದರೋ ಅವರೇ ಈಗ ರೆಡ್ಡಿ ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದ್ದಾರೆ ಎಂದರು.ನಮ್ಮವರೇ ತಂತ್ರ ಕುತಂತ್ರದಿಂದ ಜನಾರ್ದನರೆಡ್ಡಿಯವರನ್ನು ಬಳ್ಳಾರಿಯಿಂದ ದೂರ ಮಾಡಿದ್ದಾರೆ, ನಮ್ಮನ್ನು ಬಳ್ಳಾರಿಯಿಂದ ದೂರ ಮಾಡಿದವರು ತಮ್ಮ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿಕೊಳ್ಳಲಿ, ಬಳ್ಳಾರಿ ನಗರ ನಾನು ಅಭ್ಯರ್ಥಿ ಎಂದು ಘೋಷಣೆಯಾಯ್ತು.. ಆಗ ಸೋಮಶೇಖರ್ ರೆಡ್ಡಿ ಆಪ್ತರೊಬ್ಬರು ನನಗೆ ಬಳ್ಳಾರಿ ನಗರದಿಂದ ಸ್ಪರ್ಧೆಬೇಡ ಅಂತಂದ್ರು, ನೀವುದೇವರ ಹಿಪ್ಪರಗಿ ಕ್ಷೇತ್ರದಿಂದ ಸ್ಫರ್ಧೇ ಮಾಡಿ ಅಂತಾ ಹೇಳಿದರು.
ಜನಾರ್ದನ ರೆಡ್ಡಿ ಅವಧಿಯಲ್ಲಿ ಬಳ್ಳಾರಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಅವರ ಅವಧಿಯಲ್ಲಿ ಆಗಿರುವ ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಗಳು ಪೂರ್ಣವಾಗಬೇಕಾಗಿದೆ. ಅದಕ್ಕಾಗಿ ನನ್ನನ್ನ ಜನಾರ್ದನರೆಡ್ಡಿ ಅವರು ಕಣಕ್ಕಿಳಿಸಿದ್ದಾರೆ. ಜನಾರ್ದನರೆಡ್ಡಿ ರೆಡ್ಡಿ ಅವರು ಜವಾಬ್ದಾರಿಯನ್ನ ನನ್ನ ಹೆಗಲ ಮೇಲೆ ಹಾಕಿದ್ದಾರೆ. ಬಳ್ಳಾರಿ ನಗರದ ಅಭಿವೃದ್ಧಿಗಾಗಿ ನನ್ನನ್ನ ಜನರು ಆಯ್ಕೆ ಮಾಡಬೇಕು ಎಂದರು.