Monday, December 4, 2023
spot_img
- Advertisement -spot_img

ಜಿ.ಟಿ.ದೇವೇಗೌಡರು ಕಾಂಗ್ರೆಸ್‌ ಸೇರ್ತೀನಿ ಅಂದಿದ್ರು: ಸಚಿವ ರಾಜಣ್ಣ

ಹಾಸನ: ಜಿ.ಟಿ.ದೇವೇಗೌಡರು ವಿಧಾನಸಭೆ ಚುನಾವಣೆಗಿಂತ ಮುಂಚೆ ನನ್ನ ಮಗನಿಗೆ ಟಿಕೆಟ್ ಕೊಡಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂದಿದ್ದರು. ಒಂದು ಸೀಟ್ ಕೊಡ್ತೀವಿ. ಆದ್ರೆ ಎರಡೆರಡು ಸೀಟ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದೆವು. ಅವರಿಗೆ ಪಕ್ಷದ ಮೇಲೆ ಅಭಿಮಾನ ಕಡಿಮೆ ಇದೆ ಎಂದು ಕಳೆದ ಚುನಾವಣಾ ಪೂರ್ವದಲ್ಲಿಯೇ ತಿಳಿಸಿದ್ದರು. ಈಗಲೂ ಅವರಿಗೆ ಅವರ ಪಕ್ಷದ ಮೇಲೆ ಅಸಮಾಧಾನ ಇದ್ದರೆ, ನಮ್ಮ ಪಕ್ಷ ಸೇರಬಹುದು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಆಹ್ವಾನ ನೀಡಿದರು.

ಗೌರಿಶಂಕರ್ ಪಕ್ಷ ಸೇರ್ಪಡೆ ವಿಚಾರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ದಾಸರಹಳ್ಳಿ ಮಂಜುನಾಥ್ ಎಂಬುವರು ಕಾಂಗ್ರೆಸ್ ಸೇರುತ್ತಾರೆ ಎಂದು ಮಾಧ್ಯಮದಲ್ಲಿ ನೋಡಿದೆ. ನನಗೂ ಕೂಡ ಸಲೀಂ ಅಹಮದ್ ಅವರು ಫೋನ್ ಮಾಡಿ, ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ, ನೀವು ಬರಬೇಕು, ಅಧ್ಯಕ್ಷರು ಹೇಳಿದ್ದಾರೆ ಎಂದು ಹೇಳಿದರು. ನಾನು ಅದಕ್ಕೆ ಆಯ್ತಪ್ಪ ಎಂದು ಹೇಳಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಸೇರುವವರ ದೊಡ್ಡ ಪಟ್ಟಿ ನನ್ನ ಬಳಿ ಇದೆ: ಡಿಕೆಶಿ

ಪಕ್ಷಕ್ಕೆ ಸೇರಿಸಿಕೊಳ್ಳುವಾಗ ನಿಮ್ಮ ಜೊತೆ ಸಮಾಲೋಚನೆ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನನ್ನ ಮಾತ್ರ ಅಲ್ಲ, ನನ್ನ ಜಿಲ್ಲೆಯ ಯಾವ ಮುಖಂಡರನ್ನೂ ಮಾಡಿಲ್ಲ. ಗೃಹಸಚಿವ ಪರಮೇಶ್ವರ್‌ ಸೇರಿ ಇನ್ನು ಆರು ಏಳು ಜನ ಶಾಸಕರಿಗೂ ಹೇಳಿಲ್ಲ. ಜಿಲ್ಲಾ ಅಧ್ಯಕ್ಷರು ಅಥವಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷಕ್ಕೆ ಶಾಸಕರನ್ನು ಸೇರಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿಲ್ಲ. ಸೇರಿಸಿಕೊಂಡಿದ್ದಾರೆ, ಸಂತೋಷ ನಮ್ಮದೇನೂ ಅಭ್ಯಂತರ ಇಲ್ಲ. ನಮ್ಮ ಜಿಲ್ಲೆಯ ರಾಜಕಾರಣ ಏನೇ ಇದ್ದರೂ ನಿಭಾಯಿಸುವಂತಹ ಶಕ್ತಿ ನಮ್ಮ ಜನ ನಮಗೆ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭೆಯಲ್ಲಿ ಒಂದು ಅವಕಾಶ ಸಿಕ್ಕರೆ, ನಾನು ಕೂಡ ಲೋಕಸಭೆಯಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸಬೇಕು ಎಂಬುದು. ನನ್ನ ಅನಿಸಿಕೆಯನ್ನು ಹೈಕಮಾಂಡ್ ಮುಂದೆ ಮಂಡಿಸಿದ್ದೇನೆ.
ಹೈಕಮಾಂಡ್ ಅವರು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಅವರು ಚುನಾವಣೆಗೆ ನಿಲ್ಲು ಎಂದರೆ ಸ್ಪರ್ಧಿಸುತ್ತೇನೆ. ಯಾರು ಪಕ್ಷಕ್ಕೆ ಸೇರ್ತಾರೆ, ಯಾರು ಬಿಡ್ತಾರೆ ಎಂಬುದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಕಳವು ಆರೋಪ: ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಫ್ಯಾನ್ಸ್ ಗರಂ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles