Wednesday, November 29, 2023
spot_img
- Advertisement -spot_img

Narendra Modi : ಇಂಡಿಯಾ ಒಕ್ಕೂಟವನ್ನು ‘ಘಮಾಂಡಿಯಾ’ ಎಂದು ಪಿಎಂ ಮೋದಿ ವಾಗ್ದಾಳಿ

ಭೋಪಾಲ್‌: ಸನಾತನ ಧರ್ಮವನ್ನು ನಾಶ ಅವುಗಳ ಅಜೆಂಡಾವಾಗಿದೆ ಎಂದು ವಿರೋಧಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ‘ಘಮಾಂಡಿಯಾ’ (ಅಹಂಕಾರಿ) ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದ ಬಿನಾದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಮೇಲೆ ಮಾತ್ರವಲ್ಲ ಇಡೀ ಭಾರತದ ಮೌಲ್ಯಗಳ ಮೇಲೆ ಘಮಾಂಡಿಯಾ ಒಕ್ಕೂಟ ದಾಳಿ ಮಾಡುತ್ತಿದೆ. ಸನಾತನ ಧರ್ಮದಿಂದಲೇ ಇಂದು ಭಾರತ ಒಗ್ಗಟ್ಟಾಗಿದೆ ಎಂದು ಹೇಳುವ ಮೂಲಕ ಈ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸನಾತನ ಧರ್ಮಕ್ಕೆ ಅಂತ್ಯ ಹಾಡುವ ಹುನ್ನಾರ ಮಾಡುತ್ತಿದ್ದಾರೆ. ಇಡೀ ದೇಶಕ್ಕೆ ಸನಾತನದ ಬಗ್ಗೆ ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಸನಾತನ ಧರ್ಮವನ್ನು ಪಾಲಿಸುವವರು ಘಮಾಂಡಿಯಾ ಒಕ್ಕೂಟದ ಆಶಯದ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಅವರು ಸನಾತನ ಧರ್ಮವನ್ನು ದೇಶದಲ್ಲಿ ನಾಶ ಮಾಡಲು ಹೊರಟಿದ್ದಾರೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : Parliament’s Special Session Agenda : ಸಂಸತ್‌ ವಿಶೇಷ ಅಧಿವೇಶನದ ಕಾರ್ಯಸೂಚಿ ಬಿಡುಗಡೆ ಮಾಡಿದ ಸರ್ಕಾರ

ಸನಾತನ ಧರ್ಮ ಡೆಂಘೆ, ಮಲೇರಿಯಾ ಇದ್ದ ರೀತಿ. ಅದನ್ನು ವಿರೋಧಿಸುವುದು ಮಾತ್ರವಲ್ಲ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟ್ಯಾಲಿನ್‌ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಮಾತಿಗೆ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ಇಂದಿ ಒಕ್ಕೂಟ ಹಿಂದೂ ಧರ್ಮದ ವಿರೋಧಿಗಳ ಒಕ್ಕೂಟ. ನಮ್ಮ ಧರ್ಮದ ಮೇಲಿನ ದಾಳಿಯ ವಿರುದ್ಧ ಸಿಡಿದೇಳಬೇಕು. ಗಾಂಧಿ ಹಾಗೂ ತಿಲಕರು ಕೂಡ ಹಿಂದೂ ಧರ್ಮಕ್ಕಾಗಿಯೇ ಬದುಕಿದರು. ಈಗ ಈ ಇಂಡಿ ಒಕ್ಕೂಟ ಸನಾತನ ಧರ್ಮದ ನಾಶಕ್ಕೆ ಹೊರಟಿದೆ. ಇಂಡಿ ಒಕ್ಕೂಟದ ವಿರುದ್ಧ ಸನಾತನಿಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ.

ಮಧ್ಯಪ್ರದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಅಪರಾಧವನ್ನು ಹೊರತುಪಡಿಸಿ ಬೇರೇನೂ ಮಾಡಲಿಲ್ಲ. ಬಿಜೆಪಿ ಸರ್ಕಾರ ದೇಶದಲ್ಲಿ 75 ಲಕ್ಷ ಹೊಸ ಗ್ಯಾಸ್ ಸಂಪರ್ಕಗಳನ್ನು ನೀಡಲಿದೆ. ಮಧ್ಯಪ್ರದೇಶದಲ್ಲಿ 50,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ಎಂದು ಹೇಳಿದ್ದಾರೆ.

ಇದನ್ನೂ ಓದಿ : BJP : ವಿಶೇಷ ಸಂಸತ್ ಅಧಿವೇಶನ : ಲೋಕಸಭೆ ಸಂಸದರಿಗೆ 3 ಲೈನ್ ವಿಪ್ ಜಾರಿ ಮಾಡಿದ ಬಿಜೆಪಿ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles