ಬೆಂಗಳೂರು : ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ.. ರಾಜ್ಯ ಬಿಜೆಪಿ ಹಿರಿಯ ನಾಯಕ , ಬಿಎಸ್ ಯಡಿಯೂರಪ್ಪ ನಿವಾಸದಲ್ಲಿಯೂ ಸಹ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ.. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗೋ ಪೂಜೆ ನೆರವೇರಿಸಿ ದೀಪಾವಳಿ ಆಚರಿಸಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ಮನೆ ಸಿಂಗರಿಸಿ, ತಳಿರು ತೋರಣದಿಂದ ಸಿಂಗರಿಸಿ ಪೂಜೆ ನೆರವೇರಿಸಿದರು.ಪ್ರತಿ ವರ್ಷದಂತೆ ಈ ವರ್ಷವೂ ಯಡಿಯೂರಪ್ಪ ಹಬ್ಬ ಆಚರಿಸಿ, ಶುಭ ಕೋರಿದರು. ನಂತರ ಪೂಜೆ ಮಾಡಿ ಮಾಜಿ ಸಿಎಂ ಬಿಎಸ್ ವೈ ನೆಚ್ಚಿನ ಹಸು ಕರುಗಳಿಗೆ ಗೋ ಪೂಜೆ ಸಲ್ಲಿಸಿ ಧಾನ್ಯ ತಿನ್ನಿಸಿದರು.
ಅಷ್ಟೇ ಅಲ್ಲದೇ ದೀಪಾವಳಿ ಸಂಭ್ರದಲ್ಲಿರುವ ಜನತೆಗೆ ಶುಭ ಕೋರಿದ್ದು, ಎಲ್ಲರಿಗೂ ಸಂಭ್ರಮ, ಸಂತೋಷದ ಬೆಳಕಿನ ಹಬ್ಬ ದೀಪಾವಳಿಯ ಶುಭ ಕಾಮನೆಗಳು, ಈ ದೀಪಾವಳಿಯು ಎಲ್ಲರ ಬದುಕಿನಲ್ಲಿ ಆರೋಗ್ಯ, ಸುಖ, ಸಮೃದ್ಧಿಗಳ ಬೆಳಕನ್ನು ಹೊತ್ತು ತರಲಿ, ಎಲ್ಲೆಡೆ ಸಡಗರ, ಸಂಭ್ರಮ ಸಧ್ಬಾವಗಳ ಹೊಂಬೆಳಕನ್ನು ಮೂಡಿಸಲಿ ಎಂದು ವಿಶ್ ಮಾಡಿದ್ದಾರೆ.