ತುಮಕೂರು: ಮಠಕ್ಕೂ ನನಗೂ ಭಕ್ತ- ಭಗವಂತನ ಸಂಬಂಧ, ಆತ ವರ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಕೊಡ್ತಾನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಲ್ಲಿನ ಕರವಗಲ್ ಆಂಜನೇಯ ದೇವಸ್ಥಾನ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ರಾಮನ ಭಂಟ ಆಂಜನೇಯ ಸೇವೆಗೆ ಪ್ರತೀಕ. ಸಮಾಜ ಸೇವೆಯನ್ನು ಆಂಜನೇಯ ಮಾಡಿದ್ದಕ್ಕೆ ಸ್ಥಾನಮಾನ ಸಿಕ್ಕಿದ್ದು ಎಂದಿದ್ದಾರೆ.
ದೇವರು ಅವಕಾಶ ಕಲ್ಪಿಸಿ ಕೊಡ್ತಾನೆ ಈ ವೇಳೆ ಸಿಗುವ ಅವಕಾಶದಲ್ಲಿ ಏನ್ಮಾಡ್ತೀವಿ ಅನ್ನೋದು ಮುಖ್ಯ. ಗಂಗಾಧರಜ್ಜನ ಮಾರ್ಗದರ್ಶನ ಇಟ್ಟುಕೊಂಡು ಸೇವೆ ಮಾಡುತ್ತಿದ್ದೇವೆ. ಈ ಪವಿತ್ರವಾದ ಕ್ಷೇತ್ರ ನಿಮ್ಮ ಮನೆ ಮುಂದೆ ಇದೆ, ಅದನ್ನು ಉಳಿಸಿಕೊಂಡು ಹೋಗುತ್ತೀರಾ ಅಂತ ಭಾವಿಸುತ್ತೇವೆ ಎಂದು ಅಲ್ಲಿದ್ದ ಭಕ್ತಾದಿಗಳ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಸಿಎಂ ಪುತ್ರ ಯತೀಂದ್ರಗೆ ಸಾಂವಿಧಾನಿಕ ಹುದ್ದೆ!
ನಾನು ಕಳೆದ 20 ವರ್ಷದಿಂದಲೂ ಈ ಮಠಕ್ಕೆ ಬರುತ್ತಿದ್ದೇನೆ. ಮಠಗಳು ಉಳಿಯಬೇಕು. ಮಾನವ ಧರ್ಮವನ್ನು ಉಳಿಸಿಕೊಂಡು ಹೋಗಬೇಕು. ಮೊದಲು ಈ ಮಠ ಹೇಗಿತ್ತು. ಈಗ ಹೇಗಿದೆ ಅಂತ ಕೇಳುವುದಲ್ಲ, ನೋಡಬಹುದು ಎಂದಿದ್ದಾರೆ.
ಡಿ.ಕೆ ಶಿವಕುಮಾರ್‌ಗೆ ಶಾಸಕ ತಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಮುಖಂಡರು ಸೇರಿ ಹಲವರು ಸಾಥ್ ನೀಡಿದರು. ದೇವಾಲಯದಲ್ಲಿ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ತೆರಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.