ಬೆಂಗಳೂರು : ‘ದೇವರು ನನಗೆ ಮೂರನೇ ಮರು ಜನ್ಮ ಕೊಟ್ಟಿದ್ದಾನೆ, ಪಾರ್ಶ್ವವಾಯು ಬಗ್ಗೆ ದಯವಿಟ್ಟು ನಿರ್ಲಕ್ಷ್ಯ ವಹಿಸಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಜಯನಗರದ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವರಿಗೆ, ಜನ್ಮ ಕೊಟ್ಟ ತಂದೆ ತಾಯಿಗೆ, ಪುನರ್ಜನ್ಮ ನೀಡಿದ ಡಾಕ್ಟರ್‌ಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಸ್ಟ್ರೋಕ್ ಆದಾಗ ಬಿ ಫಾಸ್ಟ್ ರೀತಿಯಲ್ಲಿ ಇರಬೇಕು. ಬಡವ, ಶ್ರೀಮಂತ ಯಾರಾದ್ರೂ ಆಗಿರಲಿ, ಏನು ಆಗಿಲ್ಲ ಬೆಳಿಗ್ಗೆ ನೋಡಿಕೊಳ್ಳೋಣ ಎನ್ನದೆ ಗೋಲ್ಡನ್ ಪಿರಿಯಡ್ ನಲ್ಲಿ ಆಸ್ಪತ್ರೆಗೆ ತೆರಳಿ. ಒಂದು ಸಲ ನಿರ್ಲಕ್ಷ್ಯ ಮಾಡಿದರೆ ಜೀವನ ಪರ್ಯಂತ ಚೇತರಿಸಿಕೊಳ್ಳಲು ಆಗುವುದಿಲ್ಲ ಎಂದು ಸಲಹೆ ನೀಡಿದರು.
ಬ್ರೈನ್ ಡ್ಯಾಮೇಜ್ ಆಗಿರುವುದನ್ನು ಸರಿಪಡಿಸುವ ಕೆಲಸ ವೈದ್ಯರು ಮಾಡಿದ್ದಾರೆ. ನಾಡಿನ ಜನತೆಗೆ ಗೊತ್ತಿರುವ ಹಾಗೆ ಎರಡು ಬಾರಿ ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ. ಇಷ್ಟು ದಿನ 18 ಗಂಟೆ ಕೆಲಸ ಮಾಡ್ತಿದ್ದೆ. ಇನ್ನು ಮುಂದೆ ಅದನ್ನು ಮುಂದುವರೆಸಲು ಆಗುವುದಿಲ್ಲ. ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ವೈದ್ಯರು ಸೂಚನೆ ನೀಡಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿದ ರಾಜ್ಯದ ಜನತೆಗೆ ಧನ್ಯವಾದಗಳು ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.