Saturday, June 10, 2023
spot_img
- Advertisement -spot_img

ಶುಭ ಮುಹೂರ್ತದಲ್ಲಿ ರಾಹುಲ್ ಕೆಟ್ಟ ಶಕುನವಾಗಿ ಬರ್ತಾರೆ

ದೆಹಲಿ: ದೇಶ ಪ್ರಗತಿಯಲ್ಲಿರುವಾಗ, ಶುಭ ಮುಹೂರ್ತದಲ್ಲಿ ರಾಹುಲ್ ಕೆಟ್ಟ ಶಕುನವಾಗಿ ಮುಂದೆ ಬರುತ್ತಾರೆಯಾಕೆ ಹೀಗಾಗುತ್ತದೆ? ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಪ್ರಶ್ನಿಸಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯನ್ನು, ಅಳುತ್ತಿರುವ ಕೂಸು, ಹೊಸ ಸಂಸತ್ತಿನ ಕಟ್ಟಡವು ಪ್ರಜಾಪ್ರಭುತ್ವದ ಮಂದಿರವಾಗುವ ಇಂತಹ ಐತಿಹಾಸಿಕ ಕ್ಷಣವನ್ನು ಸ್ವಾಗತಿಸಲಾರದಂತಹ ಸಣ್ಣತನವವನ್ನು ರಾಹುಲ್ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಕೆಟ್ಟ ಶಕುನ, ದೇಶದಲ್ಲಿ ಐತಿಹಾಸಿಕ ಕ್ಷಣ ಬಂದಾಗಲೆಲ್ಲಾ ಅವರು ಎದೆ ಹೊಡೆದುಕೊಳ್ಳುತ್ತಾರೆ ಎಂದು ಟೀಕಿಸಿದರು. ನೂತನ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.

ಮೋದಿ ಸರ್ಕಾರ ಕೇವಲ ಚುನಾವಣಾ ಕಾರಣಗಳಿಗಾಗಿ ದಲಿತ ಮತ್ತು ಬುಡಕಟ್ಟು ಸಮುದಾಯಗಳಿಂದ ಭಾರತದ ರಾಷ್ಟ್ರಪತಿಗಳ ಆಯ್ಕೆಯನ್ನು ಖಚಿತಪಡಿಸಿಕೊಂಡಂತೆ ತೋರುತ್ತಿದೆ ಎಂದು ಖರ್ಗೆ ಟ್ವೀಟ್‌ ಮಾಡಿ ಟೀಕಿಸಿದ್ದರು.

ರಾಷ್ಟ್ರಪತಿಗಳ ಬದಲು ಪ್ರಧಾನಿ ಮೋದಿ ಸಂಸತ್ ಭವನವನ್ನು ಏಕೆ ಉದ್ಘಾಟಿಸುತ್ತಿದ್ದಾರೆ ಎಂದು ಹಲವು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದಾರೆ. ಆರ್‌ಜೆಡಿ ನಾಯಕ ಮನೋಜ್ ಕುಮಾರ್ ಝಾ, ಸಿಪಿಐ ನಾಯಕ ಡಿ ರಾಜಾ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಂದ್ರದ ವಿರುದ್ಧ ಕಟುವಾದ ಟೀಕೆಗಳನ್ನು ಮಾಡಿದ್ದಾರೆ.

Related Articles

- Advertisement -spot_img

Latest Articles