Monday, December 11, 2023
spot_img
- Advertisement -spot_img

ಗೌರಿಶಂಕರ್ ಕಾಂಗ್ರೆಸ್‌ಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಪರಮೇಶ್ವರ್

ರಾಮನಗರ: ಕುಂಬಳಗೂಡು ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ನಮ್ಮ ಸರ್ಕಾರದ ಕೆಲಸವಾಗಿದೆ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ಹೇಳಿದ್ದಾರೆ.

ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗೆ ಹೇಗೆ ಬೇಕೋ ಹಾಗೆ ಆರೋಪ ಮಾಡಿಕೊಳ್ಳಲಿ. ಮುನಿರತ್ನ ಅವರು ಕೇಳಿದರೆ ಅವರಿಗೂ ಅನುದಾನ ಕೊಡ್ತೇವೆ. ಎಸ್.ಟಿ.ಸೋಮಶೇಖರ್ ಅವರು ನಮಗೆ ವಿಶೇಷ. ನಾವಿಬ್ಬರು ಸ್ನೇಹಿತರು, ಹಿಂದೆ ಒಂದೇ ಪಕ್ಷದಲ್ಲಿ ಕೆಲಸ ಮಾಡಿದ್ದೇವೆ. ಅವರು ಹಿಂದೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯ ಸಂಬಂಧವೇ ಬೇರೆ. ಪರ್ಸನಲ್ ಆಗಿ ಎಸ್.ಟಿ.ಸೋಮಶೇಖರ್ ಅವರು ನನಗೆ ತುಂಬಾ ವಿಶೇಷ. ಅವರು ಪಕ್ಷಕ್ಕೆ ಬಂದರೆ ನಿಮಗೆ ಹೇಳಿಯೇ ಪಕ್ಷದ ಶಾಲು ಹಾಕುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ‘ಸೋನಿಯಾ ಗಾಂಧಿ ನನ್ನನ್ನು ಸಿಎಂ ಮಾಡ್ತಾರೆ’: ‘ಕೈ’ ನಾಯಕನ ವಿಡಿಯೋ ವೈರಲ್

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ, ನಮ್ಮ ಸಿಎಂ ಇದ್ದಾರೆ. ನಾನು ಯಾರ ಬಗ್ಗೆಯು ಮಾತನಾಡೋಲ್ಲ. ರಾಜ್ಯಾಧ್ಯಕ್ಷರ ನೇಮಕದಿಂದ ಬಿಜೆಪಿಗೆ ಆನೆಬಲ ಬಂದಿದೆಯೋ ಅಥವಾ ಒಂಟೆ ಬಲ ಬಂದಿದೆಯೋ ನಮಗೆ ಗೊತ್ತಿಲ್ಲ. ನಾನ್ಯಾಕೆ ಬೇರೆ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಲಿ. ಮೊದಲು ವಿಜಯೇಂದ್ರ ಅವರು ಅಧಿಕಾರ ಸ್ವೀಕಾರ ಮಾಡಲಿ ಅಮೇಲೆ ವಿಶ್ಲೇಷಣೆ ಮಾಡೊಣ ಎಂದು ಲೇವಡಿ ಮಾಡಿದ್ದಾರೆ.

ಗೌರಿ ಶಂಕರ್ ಅವರ ನಮ್ಮ ಪಕ್ಷಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪಕ್ಷಕ್ಕೆ ಲಾಭ ಇದೆ. ಮುಂದಿನ ಚುನಾವಣೆಗೂ ಒಳ್ಳೆಯದು. ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ. ನಾವು ಸಿಎಂ ಆಗಲಿ ಎಂಬುವವರ ಬಗ್ಗೆ ಏನು ಮಾತನಾಡೋಲ್ಲ. ಮುಖ್ಯಮಂತ್ರಿ ಪದವಿ ಬಗ್ಗೆ ಎಲ್ಲಿಯು ಹೇಳಿಕೆ ನೀಡುವುದಿಲ್ಲ. ಅಂತಹ ಪ್ರಶ್ನೆಯನ್ನು ಕೇಳಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಾವೊಬ್ಬ ಕಾರ್ಯಕರ್ತನೂ ತಲೆ ತಗ್ಗಿಸುವ ಕೆಲಸ ನನ್ನಿಂದ ಆಗಲ್ಲ: ಬಿವೈ ವಿಜಯೇಂದ್ರ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles