Sunday, March 26, 2023
spot_img
- Advertisement -spot_img

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕಾರು ಚಾಲಕ ಸಾವು

ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮುಖ್ಯ ಚಾಲಕ ರವಿಕುಮಾರ್ ಎಸ್. ಕಾಳೆ ಹೃದಯಘಾತದಿಂದ ಮೃತಪಟ್ಟಿದ್ದಾರೆ.ನಿನ್ನೆ ಹುಬ್ಬಳ್ಳಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ರಾಜ್ಯಪಾಲರನ್ನು ಪಿಕ್ ಮಾಡಲು ತೆರಳಿದ್ದರು.

ರವಿಕುಮಾರ್ ಕಾಳೆ ಅವರಿಗೆ 42 ವಯಸ್ಸಾಗಿದ್ದು,ರಾಜಭವನದ ಅಧಿಕಾರಿಗಳು, ಸಿಬ್ಬಂದಿಗಳು ಅಂತಿಮ ನಮನ ಸಲ್ಲಿಸಿದರು. ರಾಜ್ಯಪಾಲರು ನಿಗದಿತ ಸಮಯಕ್ಕಿಂತ ಬೇಗ ಆಗಮಿಸಿ, ರವಿಕುಮಾರ್ ಅವರ ಕಾರು ಏರಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಘಟನೆಯ ಬಳಿಕ ಹೆಚ್ಚವರಿ ವಾಹನ ಬಳಸಿಕೊಂಡು ರಾಜ್ಯಪಾಲರು ರಾಜ್ಯಭವನಕ್ಕೆ ತೆರಳಿದರು.

ರವಿಕುಮಾರ್ ಸುಮಾರು 16 ವರ್ಷ ಸೇವಾ ಅನುಭವ ಹೊಂದಿದ್ದರು. ಅವರ ಅಂತ್ಯಸಂಸ್ಕಾರ ಧಾರವಾಡದ ಸ್ವಗ್ರಾಮದಲ್ಲಿ ನಡೆಯಲಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರವಿಕುಮಾರ್‌ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ದೇವನಹಳ್ಳಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. ಥಾವರ್‌ಚಂದ್ ಗೆಹ್ಲೋಟ್ ರಾಜ್ಯಕ್ಕೆ ರಾಜ್ಯಪಾಲರಾಗಿ ಬಂದಾಗಿನಿಂದ ರವಿಕುಮಾರ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ರಾಜಭವನದಲ್ಲಿ ರವಿಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ರಾಜ್ಯಪಾಲರು ಪುಷ್ಪ ನಮನ ಸಲ್ಲಿಸಿದರು.

Related Articles

- Advertisement -

Latest Articles