Friday, September 29, 2023
spot_img
- Advertisement -spot_img

ಚೈತ್ರಾಗೆ ಹಣ ನೀಡಿದ್ದ ಉದ್ಯಮಿಗೂ ಸಿಸಿಬಿ ಸಂಕಷ್ಟ!

ಬೆಂಗಳೂರು : ಚೈತ್ರಾ ಕುಂದಾಪುರ ಮತ್ತು ತಂಡದ ವಿರುದ್ಧ ಬಹುಕೋಟಿ ವಂಚನೆ ಆರೋಪ ಮಾಡಿರುವ ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಅವರಿಗೂ ಸಂಕಷ್ಟ ಎದುರಾಗಿದೆ.

ಚೈತ್ರಾ ಕುಂದಾಪುರ ಮತ್ತು ತಂಡ 5ರಿಂದ 7 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಗೋವಿಂದ ಬಾಬು ಆರೋಪಿಸಿದ್ದಾರೆ. ಈ ಹಣದ ಮೂಲವನ್ನು ಪತ್ತೆ ಹಚ್ಚಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದು, ನಾಳೆ (ಸೆ.18) ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ನೀಡಿದೆ.

ನಾಳೆ ಸಿಸಿಬಿ ಗೋವಿಂದ ಬಾಬು ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ಈ ವೇಳೆ ಗೋವಿಂದ ಬಾಬು ತಾನು ಚೈತ್ರಾ ಮತ್ತು ತಂಡಕ್ಕೆ ನೀಡಿದ್ದಾರೆ ಎನ್ನಲಾದ ಹಣದ ಕುರಿತು ದಾಖಲೆ ನೀಡುವ ಅನಿವಾರ್ಯತೆ ಎದುರಾಗಲಿದೆ. ಒಂದು ವೇಳೆ ಸರಿಯಾದ ದಾಖಲೆ ನೀಡದಿದ್ದರೆ, ಗೋವಿಂದ ಬಾಬು ಅವರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಚೈತ್ರಾಗೆ ಸೇರಿದ ಕಾರು, ಹಣ, ಚಿನ್ನಾಭರಣ ವಶಕ್ಕೆ ಪಡೆದ ಸಿಸಿಬಿ

ಗೋವಿಂದ ಬಾಬು ಎಲ್ಲಾ ಹಣವನ್ನೂ ನಗದು ರೂಪದಲ್ಲೇ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕ್ಯಾಶ್ ಡ್ರಾ ಮಾಡಿರುವುದಕ್ಕೆ ಗೋವಿಂದ ಬಾಬು ಸಿಸಿಬಿಗೆ ದಾಖಲೆ ನೀಡಬೇಕು. ದಾಖಲೆ ಒದಗಿಸುವಲ್ಲಿ ವಿಫಲವಾದರೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಸಂಕಷ್ಟ ಎದುರಾಗಬಹುದು.

ವಂಚನೆ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ ಮತ್ತು ತಂಡಕ್ಕೆ ಸೇರಿದ ಕಾರು, ಹಣ ಮತ್ತು ಚಿನ್ನಾಭರಣವನ್ನು ಸಿಸಿಬಿ ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಚೈತ್ರಾಳ ಕಾರನ್ನು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪತ್ತೆ ಹಚ್ಚಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles