ಬೆಂಗಳೂರು : ಸಿದ್ದರಾಮಯ್ಯಗೆ ಕೋಲಾರವೂ ಸೇಫ್ ಅಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೂ ಸೋಲುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ನಿಂತರೂ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ, ಸಿದ್ದರಾಮಯ್ಯ ಸಿಎಂ ಆದವರು, ಡಿಸಿಎಂ ಆದವರು, ವಿಪಕ್ಷ ನಾಯಕ ಆಗಿರೋರು. ಅಂತಹವರು ಇವತ್ತು ಕ್ಷೇತ್ರಕ್ಕಾಗಿ ಅಲೆಮಾರಿ ತರಹ ಓಡಾಡುತ್ತಿದ್ದಾರೆ. ಇದು ವಿಪರ್ಯಾಸ ಎಂದು ಲೇವಡಿ ಮಾಡಿದರು.
ಕೋಲಾರದ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದು ಕೋಲಾರಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಬಳಿಕ ಹೈಕಮಾಂಡ್ ಹೇಳಿದೆ ಹಾಗೆ ಕೇಳುತ್ತೇನೆ ಅಂತಾರೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಕೋಲಾರದಲ್ಲಿ ಬಿಜೆಪಿಯೇ ಗೆಲ್ಲೋದು ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್‌ಗೆ ಯಾವ ಪರಿಸ್ಥಿತಿ ಬಂದಿದೆ ಎಂದರೆ ಸಿದ್ದರಾಮಯ್ಯ ಎಲ್ಲೆ ಸ್ಪರ್ಧೆ ಮಾಡಿದರೂ ಗೆಲುವು ಸಾಧಿಸುವುದಿಲ್ಲ, ದೇಶದಲ್ಲಿ ಕಾಂಗ್ರೆಸ್‌ಗೆ ಯಾವುದೇ ನೆಲೆ ಇಲ್ಲ. ಕಾಂಗ್ರೆಸ್ ಮನಸ್ಥಿತಿಗೆ ಘಟಾನುಘಟಿ ನಾಯಕರು ಪಕ್ಷ ತೊರೆದಿದ್ದಾರೆ ಎಂದರು.