ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದ್ದು, ಸಾರಿಗೆ ಇಲಾಖೆ ಅಂಕಿ-ಅಂಶ ಬಿಡುಗಡೆ ಮಾಡಿದೆ
ಜೂನ್ 11ರಂದು ಅನುಷ್ಠಾನಕ್ಕೆ ಬಂದ ಶಕ್ತಿ ಯೋಜನೆ 91 ದಿನಗಳನ್ನು ಪೂರೈಸಿದ್ದು, ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ ಟಿಕೆಟ್ ದರ 1,336 ಕೋಟಿ ರೂಪಾಯಿ ಆಗಿದೆ. 57 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಶಕ್ತಿ ಯೋಜನೆಯ ಅಂಕಿ-ಅಂಶ :
- ಒಟ್ಟು ಪ್ರಯಾಣಿಕರ ಓಡಾಟ – 130,14,51,347
- ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ- 57,42,74,460
- ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ – 1336,01,30,460


ತಿಂಗಳುವಾರು ಶಕ್ತಿ ಯೋಜನೆಯ ಅಂಕಿ-ಅಂಶ
ಜೂನ್ ತಿಂಗಳು :
- ಜೂನ್ ಒಟ್ಟು ಪ್ರಯಾಣಿಕರ ಓಡಾಟ -21,88,74,394
- ಜೂನ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ – 10,54,45,047
- ಜೂನ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ -248,30,13,266
ಜುಲೈ ತಿಂಗಳು
- ಜುಲೈ ಒಟ್ಟು ಪ್ರಯಾಣಿಕರ ಓಡಾಟ -33,92,94,573
- ಜುಲೈ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ – 19,63,00,625
- ಜುಲೈ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ -453,07,28,910
ಆಗಸ್ಟ್ ತಿಂಗಳು :
- ಆಗಸ್ಟ್ ಒಟ್ಟು ಪ್ರಯಾಣಿಕರ ಓಡಾಟ -34,68,46,540
- ಆಗಸ್ಟ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ – 20,03,60,680
- ಆಗಸ್ಟ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ – 459,10,82,434
ಸೆಪ್ಟೆಂಬರ್ ತಿಂಗಳು 11ರ ಮಧ್ಯರಾತ್ರಿವರೆಗೆ
- ಸೆಪ್ಟೆಂಬರ್ ಒಟ್ಟು ಪ್ರಯಾಣಿಕರ ಓಡಾಟ – 1,21,25,398
- ಸೆಪ್ಟೆಂಬರ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ – 68,63,892
- ಸೆಪ್ಟೆಂಬರ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ – 17,47,70,949
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.