ಮೈಸೂರು : ನಾಡಹಬ್ಬ ದಸರಾ ಕರ್ನಾಟಕದ ರಾಜ್ಯ ಉತ್ಸವ. ಜನರು ಎದುರು ನೋಡುವ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಈದೀಗ ಕರ್ನಾಟಕ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಗೆ ಗಜಪಡೆ ಆಗಮಿಸಿದೆ.


ಇದನ್ನೂ ಓದಿ : ಜಿ-20 ಶೃಂಗ ಸಭೆಯಲ್ಲಿ ಕೃಷ್ಣದೇವರಾಯರ ಬಗ್ಗೆ ವಿವರಣೆ
ಮೈಸೂರು ದಸರದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಈದೀಗ ಅರಮನೆಗೆ ಗಜಪಡೆ ಎಂಟ್ರಿ ಕೊಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪರಿಂದ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆನೆಗಳಿಗೆ ಸ್ವಾಗತವನ್ನು ಕೋರಿದ್ದಾರೆ. ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶ ಮಾಡಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ . ಆನೆಗಳು ಶೃಂಗಾರದಿಂದ ಕಂಗೊಳಿಸುತ್ತಿತ್ತು. ಅಭಿಮನ್ಯು ಜೊತೆಗೆ ಭೀಮ, ಧನಂಜಯ, ಗೋಪಿ, ಮಹೇಂದ್ರ , ವಿಜಯ, ವರಲಕ್ಷ್ಮೀ, ಕಂಜನ್ ಆನೆಗಳು ಆಗಮಿಸಿವೆ.


ಇದನ್ನೂ ಓದಿ : ರಾಜ್ಯ ಸರ್ಕಾರದಿಂದ ‘ಕತ್ತಲೆ ಭಾಗ್ಯ’: ಸುನಿಲ್ ಕುಮಾರ್
ಆನೆಗಳು ಮೈಸೂರು ದಸರಾ ಮಹೋತ್ಸವದ ಅವಿಭಾಜ್ಯ ಅಂಗ. ಹೀಗಾಗಿ ದಸರಾ ಗಜಪಡೆಗೆ ಅರಮನೆ ಆಡಳಿತದಿಂದ ಪೂರ್ಣಕುಂಬ ಸ್ವಾಗತದ ಜೊತೆಗೆ ಸಾಂಸ್ಕೃತಿಕ ಕಲಾತಂಡಗಳು ಈ ಕಾರ್ಯಕ್ರಮಕ್ಕೆ ಮೆರಗು ತಂದವು.


ಇದನ್ನೂ ಓದಿ : ವಿದ್ಯಾರ್ಥಿಗಳನ್ನು ವಿಶ್ವಮಾನವರಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ; ಸಿಎಂ
ಮೈಸೂರು ದಸರಾ ಉತ್ಸವಗಳು 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಪ್ರಾರಂಭವಾಯಿತು.ದಸರಾ ಹಬ್ಬವು ನವರಾತ್ರಿಯ ಆರಂಭದೊಂದಿಗೆ, ದುರ್ಗಾ ದೇವಿಯನ್ನು ಪೂಜಿಸುವ ಪವಿತ್ರ ಒಂಬತ್ತು ರಾತ್ರಿಗಳೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನವರಾತ್ರಿಯ ಹತ್ತನೇ ದಿನದಂದು ಕೊನೆಗೊಳ್ಳುತ್ತದೆ.


ಈ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇಂದಿಗೂ ಈ ಆಚರಣೆಯನ್ನು ಕರ್ನಾಟಕ ರಾಜ್ಯದ ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಭಾರಿಯ ದಸರಾ ಉತ್ಸವವನ್ನು ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.