ಅಥೆನ್ಸ್: ಗ್ರೀಸ್ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಅಲ್ಲಿ ವಿಶೇಷ ಗೌರವ ಸಂದಿದೆ. ಗ್ರೀಸ್ ಅಧ್ಯಕ್ಷೆ ಕ್ಯಾಥರಿನಾ ಸಕೆಲ್ಲರೊಪೌಲೌ ಅವರು ಮೋದಿ ಅವರಿಗೆ ಗ್ರೀಸ್ ದೇಶದ ಪ್ರತಿಷ್ಠಿತ “ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದು, ನನಗೆ ಗ್ರ್ಯಾಂಡ್ ಕ್ರಾಸ್ ಆಫ್ ಆನರ್ ಆಫ್ ಆನರ್ ನೀಡಿದ್ದಕ್ಕಾಗಿ ನಾನು ಅಧ್ಯಕ್ಷೆ ಕ್ಯಾಥರಿನಾ ಸಕೆಲ್ಲರೊಪೌಲೌ, ಸರ್ಕಾರ ಮತ್ತು ಗ್ರೀಸ್‌ನ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಇದು ಗ್ರೀಸ್‌ನ ಜನರು ಭಾರತದ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ನಾಳೆ ನಡೆಯಬೇಕಿದ್ದ ಪ್ರಧಾನಿ ಮೋದಿ ರೋಡ್ ಶೋ ರದ್ದು!
ಮೋದಿ ಸದ್ಯ ಗ್ರೀಸ್‌ನಲ್ಲಿ ಬೀಡುಬಿಟ್ಟಿದ್ದು, 40 ವರ್ಷಗಳ ನಂತರ ಗ್ರೀಸ್‌ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.