ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತಗೊಂಡಿಲ್ಲ. ಅದು ಯಾಕೆ ಹಾಗಾಯ್ತು ಅಂತ ಗೊತ್ತಾಗಲಿಲ್ಲ ಎಂದು ಗೃಹಲಕ್ಷ್ಮಿ ಯೋಜನೆ ತಾತ್ಕಾಲಿಕ ಸ್ಥಗಿತಗೊಂಡಿದೆ ಎಂಬ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿ ಕೇಳಿ ನನಗೆ ಆಶ್ಚರ್ಯ ಆಯ್ತು, ತಕ್ಷಣ ನಮ್ಮ ಸೆಕ್ರೆಟರಿ, ಡೈರೆಕ್ಟರ್ ಕರೆದು ಮಾತನಾಡಿದೆ. ಅದು ಯಾಕೆ ಹಾಗಾಯ್ತು ಅಂತ ಗೊತ್ತಾಗಲಿಲ್ಲ. ಈಗ ಸ್ಲೋ ಆಗಿ ನೋಂದಣಿ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 1.10 ಕೋಟಿ ರೂ. ಡಿಬಿಟಿ ಆಗಿದೆ. ನಮ್ಮ ಇಲಾಖೆಯಿಂದ ಹಣ ಕಳುಹಿಸಿದ್ದೇವೆ. 1.28 ಕೋಟಿ ಯಜಮಾನಿಯರಿಗೆ ಹಣ ಹೋಗುತ್ತೆ. ಹೊಸದಾಗಿ ನೋಂದಣಿ ಆದವರಿಗೂ ಯೋಜನೆ ಲಾಭ ಸಿಗಲಿದೆ. ನಮ್ಮ ಇಲಾಖೆಯಿಂದ ಅಚಾತುರ್ಯ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ಸಭೆ : ಏನೆಲ್ಲಾ ಚರ್ಚೆಯಾಗಲಿದೆ?
ಇದು ನಿರಂತರವಾಗಿ ನಡೆಯುವ ಯೋಜನೆ. ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದೇವೆ. ಯಾರು ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಾ ಇದ್ದಾರೆ ಅವರ ಮೇಲೆ ಕ್ರಮ ಆಗಲಿದೆ. ನಿನ್ನೆ ರಾತ್ರಿಯವರೆಗೆ 1.8 ಕೋಟಿ ಅಕೌಂಟ್‌ಗೆ ಹಣ ಸಂದಾಯವಾಗಿದೆ. ಅದರಲ್ಲಿ 63 ಲಕ್ಷ ರೂ. ಮಾತ್ರ ಡಿಬಿಟಿ ಆಗಿದೆ. ಇದು ನಮ್ಮ ಸಮಸ್ಯೆಯಲ್ಲ ಬ್ಯಾಂಕ್ ಸರ್ವರ್ ಸ್ಲೋ ಆಗಿದೆ. ಇನ್ನು ನಾಲ್ಕೈದು ದಿನದಲ್ಲಿ ಎಲ್ಲರಿಗೂ ಹಣ ಸಂದಾಯವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.