ನವದೆಹಲಿ: ಆಗಸ್ವ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11ರಷ್ಟು ಏರಿಕೆ ಕಂಡಿದೆ.
ಸುಧಾರಿತ ತೆರಿಗೆ ವ್ಯವಸ್ಥೆ ಮತ್ತು ವಂಚನೆಗಳನ್ನು ನಿಗ್ರಹಿಸುವ ಸರ್ಕಾರದ ಕ್ರಮಗಳಿಂದಾಗಿ ತೆರಿಗೆ ಸಂಗ್ರಹ ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿದ್ದು, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು : ಹೆಚ್ಚಾಯ್ತು ಸಕ್ಕರೆ ನಾಡಲ್ಲಿ ಪ್ರತಿಭಟನೆಯ ಕಾವು!
ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಕರ್ನಾಟಕ ನಂ. 2 ಸ್ಥಾನದಲ್ಲಿದೆ. ಆಗಸ್ಟ್‌ನಲ್ಲಿ ತೆರಿಗೆ ಸಂಗ್ರಹ ಶೇ.16ರಷ್ಟು ವೃದ್ಧಿಯಾಗಿದ್ದು 11,116 ಕೋಟಿ ರೂ.ಗೆ ಮುಟ್ಟಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 9,583 ಕೋಟಿ ರೂ. ಸಂಗ್ರಹವಾಗಿತ್ತು.
ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹದ ರಾಜ್ಯವಾಗಿ ತನ್ನ ಸ್ಥಾನವನ್ನು ಮಹಾರಾಷ್ಟ್ರ ಕಾಯ್ದುಗೊಂಡಿದೆ. ಆಗಸ್ಟ್‌ನಲ್ಲಿ ತೆರಿಗೆ ಸಂಗ್ರಹ ಶೇ. 23ರಷ್ಟು ಏರಿಕೆಯಾಗಿದ್ದು 23,282 ಕೋಟಿ ರೂ.ಗೆ ಮುಟ್ಟಿದೆ.
1.59 ಲಕ್ಷ ಕೋಟಿ ರೂ. ಸಂಗ್ರಹ
2022ರ ಆಗಸ್ವ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.43 ಲಕ್ಷ ಕೋಟಿ ರೂ.ಗಳಷ್ಟಿತ್ತು. 2023ರ ಆಗಸ್ಟ್‌ನಲ್ಲಿನ ಒಟ್ಟು ಜಿಎಸ್‌ಟಿ ಆದಾಯವಾದ 1,59,069 ಕೋಟಿ ರೂ.ಗಳಲ್ಲಿ ಕೇಂದ್ರ ಜಿಎಸ್‌ಟಿ 28,328 ಕೋಟಿ ರೂ.ಗಳಷ್ಟಿದೆ. ರಾಜ್ಯ ಜಿಎಸ್‌ಟಿ 35,794 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 83,251 ಕೋಟಿ ರೂ. (ಸರಕುಗಳ ಆಮದು ಸೇರಿದಂತೆ 43,550 ಕೋಟಿ ರೂ. ಸಂಗ್ರಹ) ಸಂಗ್ರಹವಾಗಿದೆ. ಅಲ್ಲದೇ, ಇದೇ ಅವಧಿಯಲ್ಲಿ 11,695 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,016 ಕೋಟಿ ರೂ. ಸೇರಿದಂತೆ) ಸುಂಕವನ್ನು ವಸೂಲಿ ಮಾಡಲಾಗಿದೆ.
ಇದನ್ನೂ ಓದಿ : ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಆಯ್ಕೆ!
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.