Saturday, June 10, 2023
spot_img
- Advertisement -spot_img

ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಗುಬ್ಬಿ ಶ್ರೀನಿವಾಸ್

ಬೆಂಗಳೂರು: ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಗುಬ್ಬಿ ಶ್ರೀನಿವಾಸ್ ರನ್ನು ಪಕ್ಷಕ್ಕೆ ಸ್ವಾಗತಿಸಿದರು.

ನಂತರ ಡಿಕೆಶಿವಕುಮಾರ್ ಮಾತನಾಡಿ, ಗುಬ್ಬಿ ಶ್ರೀನಿವಾಸ್‌ಗೆ ನಾನು ಹಲವು ವರ್ಷಗಳಿಂದ ಗಾಳ ಹಾಕ್ತಾ ಇದ್ದೆ. ಅವರು ನನ್ನ ಗಾಳಕ್ಕೂ ಬೀಳಲಿಲ್ಲ, ಸಿದ್ದರಾಮಯ್ಯ ಗಾಳಕ್ಕೂ ಬೀಳಲಿಲ್ಲ, ಆದರೆ ಈ ಬಾರಿ ಮತದಾರರ ಗಾಳಕ್ಕೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ತತ್ವ ಸಿದ್ಧಾಂತಗಳನ್ನು ನಂಬಿ ಮಾಜಿ ಶಾಸಕರಾದ ಶ್ರೀ ಎಸ್‌.ಆರ್‌. ಶ್ರೀನಿವಾಸ್‌, ಮೂಡಿಗೆರೆ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಹಾಲಪ್ಪ ಮತ್ತು ಮಂಡ್ಯದ ಮುಖಂಡ ಶ್ರೀ ಸತ್ಯಾನಂದ ಇಂದು ಪಕ್ಷ ಸೇರ್ಪಡೆಗೊಂಡರು. ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿ ಮುಂದಿನ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಹಾರೈಸಿದೆ ಎಂದು ಡಿಕೆಶಿವಕುಮಾರ್ ಫೇಸ್ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಬಿಜೆಪಿಗೆ ಹೋಗಲು ಮನಸ್ಸಿರಲಿಲ್ಲ, ಹಾಗಾಗಿ ಕಾಂಗ್ರೆಸ್ ಸೇರಿದ್ದೇನೆ. ನನ್ನ ಸ್ವಂತ ಮನೆಗೆ ವಾಪಸ್ಸಾಗಿದ್ದಕ್ಕೆ ಸಂತಸವಾಗಿದೆ. ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುತ್ತೇವೆ. ಜಿಲ್ಲೆಯ ಹಿರಿಯ ಮುಖಂಡರ ನೇತೃತ್ವದಲ್ಲಿ ಕೆಲಸ ಮಾಡೋಣ ಎಂದರು.ಸಿದ್ದರಾಮಯ್ಯ ಜೆಡಿಎಸ್ ಗೆ ಕರೆದಿದ್ದರು. ಹಾಗಾಗಿ 2002ರಲ್ಲಿ ನಾನು ಜೆಡಿಎಸ್​ಗೆ ಸೇರಿದ್ದೆನಾನು ಜೆಡಿಎಸ್ ಸುಲಭವಾಗಿ ಬಿಟ್ಟವನಲ್ಲ. ಕತ್ತು ಹಿಡಿದು ನನ್ನನ್ನ ದೂಡಿದ್ದಾರೆ. ಹಾಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದರು.

Related Articles

- Advertisement -spot_img

Latest Articles