ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಜೆಡಿಎಸ್ ತೊರೆದೆ, ನಾನು ಬೇಕೆಂದೇ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿಲ್ಲ ಎಂದು ಗುಬ್ಬಿ ಶ್ರೀನಿವಾಸ್ ಆರೋಪಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಮೂಲತಃ ಕಾಂಗ್ರೆಸ್ ಸದಸ್ಯ. ನಮ್ಮ ತಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈ ಹಿಂದೆ ಸಿದ್ದರಾಮಯ್ಯ, ಕುಮಾರಸ್ವಾಮಿ ನೇತೃತ್ವದಲ್ಲಿ ನಾನು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದೆ. ಆದರೆ 2004 ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ. ಪಕ್ಷೇತರವಾಗಿ ಸ್ಪರ್ಧಿಸಿ ಜಯಗಳಿಸಿದೆ.
2008 ರಲ್ಲಿ ಜೆಡಿಎಸ್ ಟಿಕೆಟ್ ನೀಡಿದರು, ಜಯಗಳಿಸಿದೆ. 2021 ರಲ್ಲಿ ಕುಮಾರಸ್ವಾಮಿ ನನಗೆ ತಿಳಿಸದೇ ಕಾರ್ಯಕ್ರಮ ಮಾಡಿ ಬೇರೆ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದರು ಎಂದು ವಿವರಿಸಿದರು.
ಸಿದ್ದರಾಮಯ್ಯರನ್ನು ಪಕ್ಷದಿಂದ ಹೊರಹಾಕಿದಂತೆ ನನ್ನನ್ನೂ ಹಾಕಿದರು ಅಷ್ಟೇ, ನಾನು ನಾಟಕ, ವಂಚನೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿಲ್ಲ. ಒಕ್ಕಲಿಗರ ಸಂಘದ ಚುನಾವಣೆ ವೇಳೆ ಗೊಂದಲವಿತ್ತು. ಅದೇ ದ್ವೇಷದ ಮೇಲೆ ನನ್ನನ್ನು ಸಿದ್ದರಾಮಯ್ಯರನ್ನು ಪಕ್ಷದಿಂದ ಹೊರ ಹಾಕಿದರು ಎಂದು ಸ್ಪಷ್ಟಪಡಿಸಿದರು.