ಮೈಸೂರು: ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಮೈಸೂರಿನಲ್ಲಿ ಪರಿಷತ್ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಸಂತಸ ವ್ಯಕ್ತಪಡಿಸಿದ್ದಾರೆ. MLC ಹೆಚ್.ವಿಶ್ವನಾಥ್ ಮಾತನಾಡಿ, ಟಿಪ್ಪು ಕನ್ನಡ ವಿರೋಧಿ ಎಂದು ಬಿಂಬಿಸುವವರಿಗೆ ಇದು ತಕ್ಕ ಉತ್ತರ, ಟಿಪ್ಪು ಸುಲ್ತಾನ್ನ ಸಾಧನೆಯನ್ನು ಕೊಂಡಾಡಿದ್ದಾರೆ. ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್.
ಕರ್ನಾಟಕದಲ್ಲಿ ಆರ್ಥಿಕ ವಲಯವನ್ನು ಉತ್ತಮ ಪಡಿಸಿದ್ದು ಟಿಪ್ಪು. ಮೈಸೂರು ಹುಲಿ ಎಂಬ ಬಿರುದು ಯಾರೋ ಮಹಾರಾಜರು ನೀಡಿಲ್ಲ. ಈ ನಾಡಿನ ಪ್ರಜೆಗಳು ಟಿಪ್ಪುಗೆ ಮೈಸೂರು ಹುಲಿ ಬಿರುದು ನೀಡಿದ್ದಾರೆ. ಟಿಪ್ಪು ಮತಾಂತರ ಮಾಡಿದ, ಹಲವರನ್ನು ಕೊಂದ ಎಂದು ಹೇಳುತ್ತಾರೆ. ಟಿಪ್ಪು ಮತಾಂತರ ಮಾಡಿಲ್ಲ, ಯಾರನ್ನೂ ಕೊಂದಿಲ್ಲ ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಟಿಪ್ಪು ಸುಲ್ತಾನ್ಗೆ ನನ್ನ ಗೌರವಪೂರ್ವಕ ನಮನ ಅರ್ಪಿಸುತ್ತೇನೆ. ದೇಶಪ್ರೇಮ, ಮಾದರಿ ಆಡಳಿತಕ್ಕೆ ಟಿಪ್ಪು ಹೆಸರುವಾಸಿಯಾಗಿದ್ದರು. ಇಂದು ಟಿಪ್ಪುರನ್ನು ಸ್ಮರಿಸೋಣ ಎಂದು H.D.ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಟಿಪ್ಪು ಬಗ್ಗೆ ಬಹಳ ಜನ ಬೇರೆ ಬೇರೆ ಹೇಳುತ್ತಾರೆ. ಆದರೆ ಇತಿಹಾಸವನ್ನು ತಿರುಚಬಾರದು. ಕನ್ನಂಬಾಡಿ ಕಟ್ಟೆಯನ್ನ ಯದುವಂಶದವರು ಕಟ್ಟಿದರು ಅದಕ್ಕೆ ಭೂಮಿ ಪೂಜೆ ಮಾಡಿದವರು ಟಿಪ್ಪು. ಯಾರೋ ಏನೋ ಹೇಳಬಹುದು, ರೈಲಿನ ಹೆಸರನ್ನು ತೆಗೆಯಬಹುದು. ಆದರೆ ನಾಡಿನ ಜನರ ಮನಸ್ಸಿನಿಂದ ಯಾರು ತೆಗೆಯಲು ಸಾಧ್ಯವಾಗದು. ಟಿಪ್ಪು ಆಡಳಿತ, ಧೈರ್ಯ ಶೌರ್ಯ, ಕಲ್ಯಾಣ ಕಾರ್ಯಕ್ರಮಗಳನ್ನು ಯಾರು ಅಲ್ಲೆಗೆಳೆಯಲು ಸಾಧ್ಯವಾಗದು ಎಂದರು.