ಗುಬ್ಬಿ: ತುಮಕೂರು ಹೆಚ್ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಟೀಕಿಸಿದವರಿಗೆ ಉತ್ತರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗುಬ್ಬಿ ಹೆಚ್‌ಎಎಲ್ ಘಟಕ ಉದ್ಘಾಟಿಸಿ ಕನ್ನಡದಲ್ಲಿ ಮಾತನಾಡಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ನಗರದ ಆತ್ಮೀಯ ನಾಗರೀಕ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು ಪೂಜ್ಯ ಶ್ರೀವಿಕುಮಾರ್ ಸ್ವಾಮೀಜಿ ತ್ರಿವಿದಾಸೋಹಿ. ನಾನು ಪೂಜ್ಯ ಸಂತರಿಗೆ ನಮಮಿಸುತ್ತೇನೆ. ಗುಬ್ಬಿ ಚಿದಂಬರ ಆಶ್ರಮ, ಭಗವಾನ್ ಚನ್ನಬಸವೇಶ್ವರರಿಗೂ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಹೇಳಿದರು.
2017ರಲ್ಲಿ ಒಂದು ಸಂಕಲ್ಪ ರೀತಿಯಲ್ಲಿ ಹೆಚ್ಎ ಎಲ್ ಘಟಕ ಶಿಲನ್ಯಾಸ ಮಾಡುವ ಸೌಭಾಗ್ಯ ಸಿಕ್ಕಿದೆ. ನಾವು ವಿದೇಶವನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು. ಆತ್ಮನಿರ್ಭರತಗೆ ಒತ್ತು ನೀಡುವ ಉದ್ದೇಶದಿಂದ ಈ ಘಟಕ ಶಿಲನ್ಯಾಸ ಗೊಂಡಿತ್ತು. ನಾವು ಇದೀಗ ಸೇನೆಯ ಹಲವು ಶಸ್ತ್ರಾಸ್ತ್ರಗಳನ್ನು ಭಾರತ ಉತ್ಪಾದಿಸುತ್ತಿದೆ. ಏರ್‌ಕ್ರಾಫ್ಟ್, ಹೆಲಿಕಾಪ್ಟರ್, ಫೈಟರ್ ಜೆಟ್, ಟ್ರಾನ್ಸ್‌ಫೋರ್ಟ್ ಜೆಟ್ ಸೇರಿದಂತೆ ಎಲ್ಲವನ್ನೂ ಭಾರತವೇ ನಿರ್ಮಾಣ ಮಾಡುತ್ತಿದೆ ಎಂದು ತಿಳಿಸಿದರು.
ಉದ್ಯೋಗ ನೀಡಬಲ್ಲ, ಮಹಿಳೆಯರನ್ನು ಸಬಲೀಕರಣ ಮಾಡಬಲ್ಲ, ಮೇಕ್ ಇನ್ ಇಂಡಿಯಾ ಶಕ್ತಿ ಇಮ್ಮಡಿಗೊಳಿಬಲ್ಲ ಯೋಜನೆ ಲೋಕಾರ್ಪಣೆಯಾಗಿದೆ. ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ತುಮಕೂರು ಗ್ರಾಮ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೂ ಚಾಲನೆ ಸಿಕ್ಕಿದೆ ಎಂದು ತಿಳಿಸಿದರು.
ಹೆಲಿಕಾಪ್ಟರ್ ಉತ್ಪಾದನೆಯಾದರೆ ನಮ್ಮ ಸೇನಾ ಶಕ್ತಿ ದ್ವಿಗುಣ ಗೊಳ್ಳಲಿದೆ. ಇದರಿಂದ ನಮ್ಮ ಯುವ ಸಮೂಹಕ್ಕೆ ಉದ್ಯೋಗ ಸಿಗಲಿದೆ ಹೆಚ್ಎಎಲ್ ಉತ್ಪಾದನೆ ಘಟಕದಿಂದ ಇಲ್ಲಿ ಹಲವು ವ್ಯಾಪಾರ, ಉದ್ಯೋಗಕ್ಕೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.