Wednesday, November 29, 2023
spot_img
- Advertisement -spot_img

ಹಮಾಸ್ ಸುರಂಗ ಕಂಡು ಇಸ್ರೇಲ್ ಪಡೆಗೆ ಶಾಕ್: ವಿಡಿಯೋ ರಿಲೀಸ್ ಮಾಡಿದ ಸೇನೆ!

ಜೆರುಸಲೇಂ: ಹಮಾಸ್ ಬಂಡುಕೋರರು ಅಡುಗುದಾಣಗಳ ಧ್ವಂಸ ಮಾಡಲು ಮುಂದಾಗಿರುವ ಇಸ್ರೇಲ್‌ ಹೊಸ ವಿಡಿಯೋ ಹಂಚಿಕೊಂಡಿದೆ. ಗಾಜಾದಲ್ಲಿರು ಆಸ್ಪತ್ರೆಯೇ ಹಮಾಸ್ ಬಂಡುಕೋರರ ಟನಲ್ ಪ್ರವೇಶಕ್ಕೆ ರಹದಾರಿಯಾಗಿದೆ ಎಂದು ತಿಳಿಸಿದೆ.

ಗಾಜಾ ಆಸ್ಪತ್ರೆ ಹಿಂಭಾಗದಲ್ಲಿ ಸುರಂಗವನ್ನು ಕಂಡುಹಿಡಿದ ಇಸ್ರೇಲ್ ಪಡೆ ಅದನ್ನು ಧ್ವಂಸಗಳಿಸಿತ್ತು. ಬಳಿಕ ಸುರಂಗವನ್ನು ಪರಶೀಲನೆ ನಡಸಿರುವ ಇಸ್ರೇಲ್‌ ಪಡೆಗೆ ಶಾಕ್ ಕಾದಿತ್ತು. ಈ ಸುರಂಗ ಮಾರ್ಗವು ಅತ್ಯಾಧುನಿಕ ತಂತ್ರಗಳ ಬಳಸಿ ರಚಿಸಲಾಗಿದೆ.

ಇದನ್ನೂ ಓದಿ: ಜ.22 ರಾಮ ಮಂದಿರ ಉದ್ಘಾಟನೆ: ದೇಶಾದ್ಯಂತ 10 ಕೋಟಿ ಕುಟುಂಬಕ್ಕೆ ಆಹ್ವಾನ!

ಈ ಸುರಂಗಕ್ಕೆ ಸೋಲಾರ್ ಮೂಲಕ ವಿದ್ಯುತ್ ಸಂಚಾರವಾಗುತ್ತಿದ್ದು, ಸುಮಾರು 20 ಅಡಿ ಆಳವಿದೆ. ಈ ಮಾರ್ಗ ನೇರವಾಗಿ ಆಸ್ಪತ್ರೆಯ ನೆಲಮಹಡಿ ತಲುಪಿರುವುದನ್ನು ಇಸ್ರೇಲ್ ಪಡೆ ಮತ್ತೆ ಮಾಡಿದೆ. ಸುರಂಗದ ಬಾಗಿಲು ಬುಲೆಟ್ ಪ್ರೂಫ್ ಹಾಗೂ ದಾಳಿಯನ್ನು ತಡೆದುಕೊಳ್ಳಬಹುದುದಾಗಿದ್ದು, ಮೇಲಿನಿಂದ ಸುರಂಗ ಪತ್ತೆ ಮಾಡಲು ಕಷ್ಟವಾಗುವ ರೀತಿ ರಚಿಲಾಗಿದೆ.

ಈ ಸುರಂಗ ಮಾರ್ಗದಿಂದ ರಾಂಟಿಸಿ ಆಸ್ಪತ್ರೆಯು ಕೇವಲ 200 ಗಜಗಳ (183 ಮೀಟರ್) ದೂರದಲ್ಲಿದೆ. ಹಮಾಸ್ ಆಸ್ಪತ್ರೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಪಡೆ ಆರೋಪಿಸಿ ಆಸ್ಪತ್ರೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಆದರೆ ಸುರಂಗ ಪತ್ತೆ ಮಾಡಲು ವಿಫಲವಾಗಿತ್ತು.

ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಬಿಗ್‌ ರಿಲೀಫ್ ಕೊಟ್ಟ ಲೋಕಾಯುಕ್ತ ಕೋರ್ಟ್‌

ಈ ಸುರಂಗಗಳ ಒಳಗೆ, ಹಮಾಸ್ ಭಯೋತ್ಪಾದಕರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಜೊತೆಗೆ ಅವರು ಇಲ್ಲಿಂದಲೇ ನಮ್ಮ ಮೇಲೆ ತಂತ್ರ ರೂಪಿಸುತ್ತಾರೆ ಎಂದು ಇಸ್ರೇಲ್ ಭದ್ರತಾ ಪಡೆಗಳು ಟ್ವಿಟರ್‌ನಲ್ಲಿ ಹೇಳಿವೆ. ಸುರಂಗವು ಯಾರಿಗೂ ಸಿಗದಂತೆ ಮುಚ್ಚಲ್ಪಟ್ಟಿದೆ ಮತ್ತು ಆಸ್ಪತ್ರೆಯು ಶಾಲೆ ಮತ್ತು ಯುಎನ್ ಕಟ್ಟಡದ ಪಕ್ಕದಲ್ಲಿದೆ ಎಂದು ಇಸ್ರೇಲಿ ಪಡೆಗಳು ತಿಳಿಸಿವೆ.

ಈ ಸುರಂಗ ಪ್ರವೇಶಿಸಿದ ಇಸ್ರೇಲಿ ಪಡೆಗಳಿಗೆ ಗ್ರೆನೇಡ್, ಬಾಂಬ್‌ಗಳು, ನೆಲ ಬಾಂಬ್, ಬುಲೆಟ್ ಪ್ರೂಫ್ ಜಾಕೆಟ್, ರಾಕೆಟ್ ಲಾಂಚರ್‌ಗಳು ಸೇರಿ ಗನ್‌ಗಳು ಸಿಕ್ಕಿವೆ. ಗಾಜಾದಲ್ಲಿರುವ ಇತರೆ ಸುರಂಗದಲ್ಲೂ ಈ ರೀತಿ ಶಸ್ತ್ರಾಸ್ತ್ರಗಳ ಸಂಗ್ರಹಿಸಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles