ಹರಿಯಾಣ: ನಿವಾಸ ಪ್ರಮಾಣಪತ್ರ ಹೊಂದಿರುವ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ 75% ಮೀಸಲಾತಿ ನೀಡುವ ಮನೋಹರ್ ಲಾಲ್ ಖಟ್ಟರ್ ಅವರ ಸರ್ಕಾರಿ ಕಾನೂನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜಿಎಸ್ ಸಂಧವಾಲಿಯಾ ಮತ್ತು ಹರ್‌ಪ್ರೀತ್ ಕೌರ್ ಜೀವನ್ ಅವರಿದ್ದ ಪೀಠ ಈ ಆದೇಶ ನೀಡಿದೆ. 2021ರಲ್ಲಿ ಗುರ್ಗಾಂವ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಸೇರಿದಂತೆ ಅನೇಕ ಉದ್ಯಮ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಮತದಾರರಿಗೆ ಬಿಜೆಪಿ ಹಣ, ಮದ್ಯ ಹಂಚುತ್ತಿದೆ: ಕಮಲ್‌ನಾಥ್ ಆರೋಪ
ಹರಿಯಾಣ ರಾಜ್ಯವು ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ, 2020, ₹30,000 ಕ್ಕಿಂತ ಕಡಿಮೆ ಮಾಸಿಕ ವೇತನವನ್ನು ನೀಡುವ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಯುವಕರಿಗೆ 75% ಮೀಸಲಾತಿಯನ್ನು ನೀಡಿ ಕಾನೂನು ಜಾರಿ ಮಾಡಿತ್ತು. ಇದು ಖಾಸಗಿ ಕಂಪನಿಗಳು, ಸೊಸೈಟಿಗಳು, ಟ್ರಸ್ಟ್‌ಗಳು ಮತ್ತು ಪಾಲುದಾರಿಕೆ ಸಂಸ್ಥೆಗಳನ್ನು ಒಳಗೊಂಡಿದೆ. ಪ್ರಸ್ತುತ ಕಾನೂನು ಮುಂದಿನ 10 ವರ್ಷಗಳವರೆಗೆ ಅನ್ವಯಿಸುವಂತೆ ನಿಯಮ ಜಾರಿ ಮಾಡಲಾಗಿತ್ತು.
ಉದ್ಯಮ ಸಂಸ್ಥೆಗಳು ಕಾನೂನು ಅಸಾಂವಿಧಾನಿಕವಾಗಿದೆ ಮತ್ತು ವ್ಯಾಪಾರ, ವ್ಯವಹಾರ ಬೆಳೆಯಲು ಮತ್ತು ಸ್ಪರ್ಧಾತ್ಮಕವಾಗಿ ಉಳಿಯಲು ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅರ್ಹತೆಯ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ವಾದಿಸಿದ್ದವು.
ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಾಗರಿಕರ ಸಾವಿಗೆ ಭಾರತ ಖಂಡನೆ!
ಈ ಕಾನೂನಿನ ಮೂಲಕ ಸಂಸ್ಥೆಗಳಲ್ಲಿ ನುರಿತ ಹಾಗೂ ಪರಿಣಿತ ನೌಕರರ ನೇಮಿಸಿಕೊಳ್ಳುವುದು ಸೇರಿ ಕೌಶಲಯುತ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ವಾದಿಸಿದ್ದವು.
ಇದು ರಾಜ್ಯದಲ್ಲಿ ನೆಲೆಸಿರುವ ಜನರ ಜೀವನ / ಜೀವನೋಪಾಯದ ಹಕ್ಕನ್ನು ರಕ್ಷಿಸುವುದು ಮತ್ತು ಅವರ ಆರೋಗ್ಯ, ಜೀವನ ಪರಿಸ್ಥಿತಿ ಮತ್ತು ಉದ್ಯೋಗದ ಹಕ್ಕನ್ನು ರಕ್ಷಿಸುವುದು” ಎಂದು ಸರ್ಕಾರದ ಪರವಾಗಿ ವಾದ ಮಂಡಿಸಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.