ಹಾಸನ : ನವೆಂಬರ್ ತಿಂಗಳ ಒಳಗೆ ಹಾಸನ ಫ್ಲೈ ಓವರ್ ಓಪನ್ ಮಾಡ್ತೇವೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಹಾಸನ ನಗರದ ಎನ್ ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ನಡೆಯುತ್ತಿರುವ ರೈಲ್ವೇ ಮೇಲ್ಸೇತುವೆ ಸಂಸದರಾದ ಪ್ರಜ್ವಲ್ ರೇವಣ್ಣ ಜೊತೆ ಶಾಸಕ ಸ್ವರೂಪ್ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.
ಇದನ್ನೂ ಓದಿ : ‘ಬಿಜೆಪಿ ಕಚೇರಿ ಇರೋದು ಪಕ್ಷ ಸಂಘಟನೆಗೆ; ಅಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು’
ROB ಕಾಮಗಾರಿಗೆ ಕೇಂದ್ರದ ಸಂಪೂರ್ಣ ಅನುದಾನ ಕೊಟ್ಟಿದ್ದೇವೆ, ತ್ವರಿತಗತಿಯಲ್ಲಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ , ರಾಜ್ಯ ಸರ್ಕಾರ 25 ರಿಂದ 30 ಕೋಟಿ ಕೊಟ್ಟಿದ್ದಾರೆ, ನಾವು ಅಡಿಷನಲ್ ಆಗಿ 25 ಕೊಟ್ರೆ ಈ ಬ್ರಿಡ್ಜ್ ನ ಸಂಪೂರ್ಣವಾಗಿ ಕಂಪ್ಲೀಟ್ ಮಾಡಬಹುದೆಂದು ಕೇಳಿದ್ದೇವೆ, 101 ಕೋಟಿಯಲ್ಲಿ 75 ಕೋಟಿ ಖರ್ಚು ಮಾಡಿದ್ದೀವಿ 25 ಕೋಟಿ ಕೇಳುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಏನು ಅನುದಾನ ಬರಬೇಕಿತ್ತು ಅದನ್ನ ಕೇಳ್ತಾ ಇದೀವಿ, ನಾನು ಬರೋದಕ್ಕಿಂತ ಮುಂಚೇನೆ ಯಾರೋ ಕಂಟ್ರಾಕ್ಟರ್ ಇಂಜಿನಿಯರ್ ಗಳೆಲ್ಲ ಸೇರಿ ಕಾಮಗಾರಿ ಕೆಟ್ದಾಗಿ ಮಾಡಿದ್ದರಿಂದ ಮೂರನೇ ಬಾರಿ ಫ್ಲೈ ಓವರ್ ಕುಸಿದಿದೆ, ಕಳಪೆ ಕಾಮಗಾರಿ ಮಾಡಿದ ಎಂಜಿನಿಯರ್‌ನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.