ಹಾಸನ : ಟಿಕೆಟ್ ಹಂಚಿಕೆ ಬಗ್ಗೆ ನಾನೊಬ್ಬನೇ ತೀರ್ಮಾನ ಮಾಡೋ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿ ರೇವಣ್ಣ ನನ್ನ ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದರೂ ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಭ್ರಮನಿರಸನ ಆಗ್ತಾರೆ ಎಂದು ತಿಳಿಸಿದರು.
ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಬಿಪ್ರಾಯ ಇಲ್ಲ, ಎಲ್ಲರೂ ಆರಾಮಾಗಿದ್ದೇವೆ, ಹಾಸನ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯದ ಅಧ್ಯಕ್ಷ ರಾದ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದರು. ನಮಗೇನು ಕುಟುಂಬದ್ದು ಇಲ್ಲ ಏನೂ ಇಲ್ಲ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹೇಳ್ತೀನಿ ನಿಮ್ಮ ಕುಟುಂಬದವರನ್ನು ನಿಲ್ಲಿಸಬೇಡಿ, ನಮ್ಮ ಕುಟುಂಬದವರನ್ನು ನಿಲ್ಲಿಸೋ ಪ್ರಶ್ನೆ ಇಲ್ಲ , ಪ್ರಜ್ವಲ್, ಸೂರಜ್ ಗೆ ರಾಜೀನಾಮೆ ಕೊಡಿಸ್ತೇನೆ, ಯಾವುದೇ ಕುಟುಂಬದವರು ಬೇಡ ಎಂದು ನಿಯಮ ತಂದ್ರೆ ಅದನ್ನೇ ಪಾಲಿಸಿದರೆ ಆಯಿತು ಎಂದು ತಿಳಿಸಿದರು.
ಮಾಜಿ ಸಿಎಂ ಎಚ್ ಡಿಕುಮಾರಸ್ವಾಮಿ ರಾಜ್ಯದ ಜನತೆಗಾಗಿ ಹಗಲಿರುಳು ಶ್ರಮಿಸ್ತಾ ಇದ್ದಾರೆ, ಎಲ್ಲರೂ ಕೂತು ಚರ್ಚೆಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದುಕೊಂಡ ನಂತರವೇ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು. ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್ ಪೋರ್ಟ್ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದ್ಧಾರೆ. ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು