ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವೇಗೌಡರು ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಬಂದ ಬಳಿಕ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಹೇಳಿದ್ದರು.
ಇನ್ನೂ ನನಗೆ ದೇವೇಗೌಡರ ಬದುಕು ಮುಖ್ಯ. ನನ್ನ ಎದುರು ಅವರು ಕಟ್ಟಿರುವ ಪಕ್ಷ, ಇವತ್ತು 220 ಸೀಟ್ ಗೆಲ್ಲಬೇಕು ಎಂದು ಹೊರಟಿದ್ದೀನಿ. ಇದನ್ನು ಅವರಿಗೆ ಕಾಣಿಕೆ ಕೊಡಲು ಮುಂದಾಗಿದ್ದೀನಿ. ಅವರು ಸಾಯೋದಕ್ಕೂ ಮುನ್ನ ಅವರ ಪಕ್ಷ ಉಳಿಯಿತು ಅಂತ ಸಾಬೀತು ಮಾಡಲು ಹೊರಟಿದ್ದೀನಿ. ದಯಮಾಡಿ ದೇವೇಗೌಡ ಹೆಸರನ್ನು ಮಧ್ಯೆ ತರಬೇಡಿ ಎಂದು ಹೇಳುವ ಮೂಲಕ ಹೆಚ್ ಡಿ ದೇವೇಗೌಡರ ಆರೋಗ್ಯದ ಬಗ್ಗೆ ಭಾವುಕರಾಗಿದ್ದರು.